ಕರಾವಳಿ

ಕರಾವಳಿಕ್ರೈಂ

ಉಪ್ಪಿನಂಗಡಿ: ಪೋಲಿಸ್ ಠಾಣೆಯ ಸಮೀಪದಲ್ಲೇ ಅಂಗಡಿಗೆ ನುಗ್ಗಿ ಕೈ ಕಳ್ಳರ ಚಲಕ..!

ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ  ಘಟನೆ ಅ.13 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ಲಕ್ಷ್ಮಿ ಸ್ಟೋರ್ ನ

Read More
ಕರಾವಳಿಕ್ರೈಂ

ವಿಟ್ಲ: ಅಂಗಡಿ ಶಟರ್’ನಲ್ಲಿ ‘Name jihad’ ಬರಹ

ವಿಟ್ಲ: ಅಂಗಡಿಯೊಂದರ ಶಟರ್ ನಲ್ಲಿ ಕಿಡಿಗೇಡಿಗಳು ‘Name jihad’ ಎಂದು ಬರೆದ ಘಟನೆ ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್ ನಲ್ಲಿ ನಡೆದಿದೆ. ಅ.11ರಂದು

Read More
ಕರಾವಳಿ

SDPI ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಮನೆ ಮೇಲೆ ಪೊಲೀಸ್ ದಾಳಿ

ಮಂಗಳೂರು: ಬೆಳ್ಳಂಬೆಳಗ್ಗೆ ನಿಷೇಧಿತ ಪಿಎಫ್ ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, SDPI ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಮನೆ ಮೇಲೆ ದಾಳಿ ನಡೆದಿದೆ. ಅಬೂಬಕರ್ ಕುಳಾಯಿ

Read More
ಕರಾವಳಿ

ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾದ ಉಸ್ಮಾನುಲ್ ಫೈಝಿ ತೋಡಾರುರವರಿಗೆ ಸನ್ಮಾನ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ  ಮುಶಾವರ ಸದಸ್ಯರಾಗಿ ಆಯ್ಕೆಯಾದ ಉಸ್ಮಾನುಲ್ ಫೈಝಿ ತೋಡಾರು ಅವರನ್ನು ಪುತ್ತೂರು ನಗರಸಭೆ ಸದಸ್ಯ ರಿಯಾಝ್ ಪರ್ಲಡ್ಕ ನೇತೃತ್ವದಲ್ಲಿ ಉಸ್ಮಾನುಲ್ ಫೈಝಿ

Read More
ಕರಾವಳಿ

ಮಾಜಿ ಜಿ.ಪಂ ಸದಸ್ಯರೋರ್ವರ ಪುತ್ರಿಯ ಮೂತ್ರಕೋಶದ ನಾಳದಲ್ಲಿ ತೊಂದರೆ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಕುಟುಂಬ

ಪುತ್ತೂರು: ಕೆಯ್ಯೂರು ಕೆಪಿಎಸ್‌ನ ಆಂಗ್ಲ ಮಾಧ್ಯಮ ವಿಭಾಗದ ೨ ತರಗತಿಯಲ್ಲಿ ಕಲಿಯುತ್ತಿರುವ ಪುಟ್ಟ ಬಾಲಕಿಯೋರ್ವಳಿಗೆ ಮೂತ್ರಕೋಶದ ನಾಳದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ತುರ್ತು ಶಸ್ತ್ರ ಚಿಕಿತ್ಸೆ ಆಗಬೇಕಾಗಿದೆ ಎಂದು ವೈದ್ಯರ ನೀಡಿದ ಸೂಚನೆಯಂತೆ ಶಸ್ತ್ರಚಿಕಿತ್ಸೆಗೆ ಸಹೃದಯಿ ದಾನಿಗಳು ಧನ ಸಹಾಯ ಮಾಡುವಂತೆ ಕೆಯ್ಯೂರು ಕೆ.ಪಿ.ಎಸ್‌ನ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಬಾಬುರವರು ಅ.11ರಂದು ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಕೆಯ್ಯೂರು ಗ್ರಾಮ ಸಭೆಯಲ್ಲಿ ಮನವಿ ಮಾಡಿಕೊಂಡರು.  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿ.ಪಕೀರ ಎಂ.ರವರು ಪುತ್ರಿಯಾಗಿರುವ ಯುಕ್ತಾ ಪಿ.ಡಿ ಇವರು ಕೆಯ್ಯೂರು ಕೆಪಿಎಸ್‌ನಲ್ಲಿ 2 ತರಗತಿಯಲ್ಲಿ ಕಲಿಯುತ್ತಿದ್ದಾರೆ. ಇವಳಿಗೆ ಮೂತ್ರಕೋಶದ ನಾಳದಲ್ಲಿ ತೊಂದರೆಯಾಗಿದ್ದು ಮಂಗಳೂರಿನ ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ತೋರಿಸಿ, ಸಿಟಿ ಸ್ಕ್ಯಾನ್ ಮಾಡಿದಾಗ ಮೂತ್ರಕೋಶದ ನಾಳದ ಮಧ್ಯದಲ್ಲಿ ಚಿಕ್ಕದಾಗಿದ್ದು ತಕ್ಷಣ ಸರ್ಜರಿ ಮಾಡಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಮಗುವಿನ ತಾಯಿಗೆ ಯಾವುದೇ ಉದ್ಯೋಗ ಇಲ್ಲದೇ ಇರುವುದರಿಂದ ಶಸ್ತ್ರಚಿಕಿತ್ಸೆಗೆ ಸುಮಾರೂ.1 ಲಕ್ಷದ 30 ಸಾವಿರ ರೂ. ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು ಆದ್ದರಿಂದ ದಾನಿಗಳು ಧನ ಮಾಡುವಂತೆ ಶಾಲಾ ಪರವಾಗಿ ಅವರು ಕೇಳಿಕೊಂಡರು. ಈ ಬಗ್ಗೆ ವಾಟ್ಸಫ್‌ನಲ್ಲಿ ಶಾಲಾ ಪರವಾಗಿ ಮನವಿ ಪತ್ರವನ್ನು ಕೂಡ ಹರಿಯಬಿಟ್ಟಿದ್ದಾರೆ. ಸಭೆಯಲ್ಲಿದ್ದ ಮಗುವಿನ ತಾಯಿ ಧರಣಿಯವರು ಮಾತನಾಡಿ, ಈಗಾಗಲೇ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದ್ದೇನೆ. ನನ್ನ ಮಗುವಿನ ಮೂತ್ರಕೋಶದ ನಾಳದ ಮಧ್ಯದಲ್ಲಿ ಚಿಕ್ಕದಾಗಿದ್ದು ಕೂಡಲೇ ಸರ್ಜರಿ ಮಾಡಬೇಕೆಂದು ಮಂಗಳಾ ಕಿಡ್ನಿ ಫೌಂಡೇಶನ್‌ನ ವೈದ್ಯರು ತಿಳಿಸಿದ್ದಾರೆ. ಹಣದ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 1 ತಿಂಗಳ ಗೌರವಧನ ಪಾವತಿಸಿ ಪಂಚಾಯತ್ ಸದಸ್ಯರುಗಳು ಕೆಯ್ಯೂರು ಗ್ರಾಪಂನಿಂದ 10 ಸಾವಿರ ರೂ. ನೀಡುವುದಾಗಿ ಈಗಾಗಲೇ ತಿಳಿಸಲಾಗಿದೆ ಎಂದು ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹೇಳಿದರು. ಇದೇ ವೇಳೆ ಮಾತನಾಡಿದ ಜಯಂತ ಪೂಜಾರಿ ಕೆಂಗುಡೇಲುರವರು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಒಪ್ಪಿಗೆಯಂತೆ ಸದಸ್ಯರುಗಳ ಒಂದು ತಿಂಗಳ ಗೌರವಧನ ಒಟ್ಟು 15 ಸಾವಿರ ರೂ.ಅನ್ನು ಮಗುವಿನ ಶಸ್ತ್ರಚಿಕಿತ್ಸೆಗೆ ನೀಡುವುದಾಗಿ ತಿಳಿಸಿದರು. ಸಹಾಯಕ್ಕೆ ಮನವಿ ಧನ ಸಹಾಯ ಮಾಡುವ ದಾನಿಗಳು ಬ್ಯಾಂಕ್ ಆಫ್ ಬರೋಡ ಕುಂಬ್ರ ಶಾಖೆಗೆ ಧನ ಸಹಾಯ ಮಾಡಬಹುದು. ಧರಣಿ ಸಿ.ಬಿ, ಖಾತೆ ಸಂಖ್ಯೆ -70720100002621, ಐಎಫ್‌ಎಸ್‌ಸಿ ಕೋಡ್ -BARB0VJKUMB  ಮೊ.ನಂ. 7760372689

Read More
ಕರಾವಳಿ

ಸಿಝಾನ್ ಹಸನ್‌ರವರಿಗೆ ಸನ್ಮಾನ

ಪುತ್ತೂರಿನಲ್ಲಿ ಸುಮಾರು 50ರಷ್ಟು ಜನ ತುಂಬಿದ ಬಸ್ಸು ಚಾಲಕನಿಲ್ಲದಿದ್ದಾಗ ಹಿಂದಕ್ಕೆ ಚಲಿಸಿದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಜನರ ಜೀವ ಉಳಿಸಿ ಆಪತ್ಬಾಂಧವನಾಗಿದ್ದ ಸಿಝಾನ್ ಹಸನ್ ಉಪ್ಪಿನಂಗಡಿಯವರಿಯರನ್ನು ಪುತ್ತೂರು

Read More
ಕರಾವಳಿ

 ತ್ಯಾಜ್ಯ ಹಾಕಿದ ಎರಡು ಪ್ರತ್ಯೇಕ ಪ್ರಕರಣ: ಗ್ರಾಪಂನಿಂದ ದಂಡ

ಪುತ್ತೂರು: ಹೊಳೆಗೆ ಮತ್ತು ರಸ್ತೆ ಬದಿಗೆ ತ್ಯಾಜ್ಯ ಹಾಕಿದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಯ್ಯೂರು ಗ್ರಾಮ ಪಂಚಾಯತ್ ತ್ಯಾಜ್ಯ ಹಾಕಿದವರಿಗೆ ತಲಾ 2 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ.  ಗ್ರಾಪಂ ವ್ಯಾಪ್ತಿಯ ಮಾಡಾವು ಹೊಳೆಗೆ ಅ.8 ರಂದು ಸಂಜೆ ಕೋಳಿ ತ್ಯಾಜ್ಯ ಹಾಗೂ ಇತರ ಕಸಗಳನ್ನು ಹಾಕುತ್ತಿದ್ದ ಬೆಳ್ಳಾರೆ ಮೂಲದ ವ್ಯಕ್ತಿಯೋರ್ವನನ್ನು ಸಾರ್ವಜನಿಕರ ಮಾಹಿತಿಯಂತೆ ಹಿಡಿದ ಗ್ರಾಪಂ ಅಧಿಕಾರಿಗಳು ಆತನಿಗೆ 2 ಸಾವಿರ ರೂ. ದಂಡ ವಿಧಿಸಿ, ಆತ ಹಾಕಿದ ತ್ಯಾಜ್ಯವನ್ನು ಆತನಲ್ಲೇ ಹೆಕ್ಕಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.  ಅ.10 ರಂದು ಬೆಳಿಗ್ಗೆ ಮಾಡಾವು ಸಂತೋಷ್‌ನಗರದಲ್ಲಿ ರಸ್ತೆ ಬದಿಗೆ ಮೀನಿನ ತ್ಯಾಜ್ಯ ಹಾಗೂ ಕಸ ಹಾಕುತ್ತಿದ್ದ ಪುತ್ತೂರು ಕೂರ್ನಡ್ಕದ ವ್ಯಕ್ತಿಯೋರ್ವರನ್ನು ಸಾರ್ವಜನಿಕರ ಮಾಹಿತಿಯಂತೆ ಹಿಡಿದು ಆತನಿಗೂ 2 ಸಾವಿರ ರೂ. ದಂಡ ವಿಧಿಸಿ, ಆತ ಹಾಕಿದ ಕಸವನ್ನು ಆತನಲ್ಲೇ ಹೆಕ್ಕಿಸಿ ಎಚ್ಚರಿಕೆ ನೀಡಿ ಕಳುಹಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಎರಡು ಪ್ರಕರಣಗಳಲ್ಲಿ ಸಂಬಂಧಿಸಿದಂತೆ ಸಾರ್ವಜನಿಕರು ಪಂಚಾಯತ್‌ಗೆ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕಸ ಹಾಕುತ್ತಿದ್ದವರಿಗೆ ದಂಡನೆ ವಿಧಿಸಿದ್ದಾರೆ. ಆದ್ದರಿಂದ ಎಲ್ಲಾದರೂ ಸಾರ್ವಜನಿಕ ಸ್ಥಳಗಳಿಗೆ, ಹೊಳೆ, ನೀರಿನ ಮೂಲಕ್ಕೆ ತ್ಯಾಜ್ಯ,ಕಸ ಹಾಕುತ್ತಿರುವುದು ಕಂಡು ಬಂದರೆ ತಕ್ಷಣವೇ ಪಂಚಾಯತ್ ಅಧಿಕಾರಿಗಳಿಗೆ ಅಥವಾ ಸದಸ್ಯರುಗಳಿಗೆ ಮಾಹಿತಿ ನೀಡುವಂತೆ ಅಭಿವೃದ್ಧಿ ಅಧಿಕಾರಿ ನಮಿತಾ ಕೆ.ರವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ 2 ಸಾವಿರ ರೂ.ದಂಡ ವಿಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಕೃತ್ಯಗಳು ಕಂಡುಬಂದರೆ 5 ಸಾವಿರ ರೂ.ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Read More
ಕರಾವಳಿರಾಜಕೀಯ

ಬ್ಲಾಕ್ ಕಾಂಗ್ರೆಸ್ ಸಭೆಗೆ ಶಕುಂತಳಾ ಶೆಟ್ಟಿ ಗೈರು

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅ.10 ರಂದು ನಡೆದ ಸಭೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಗೈರಾಗಿದ್ದಾರೆ. ಕೆಲದಿನಗಳ ಹಿಂದೆ ಕಚೇರಿಯಲ್ಲಿ ನಡೆದ ಆಯುಧ ಪೂಜಾ

Read More
ಕರಾವಳಿ

ಈದ್ ಮಿಲಾದ್: ಯಂಗ್ ಬ್ರೀಗೇಡ್ ಪುತ್ತೂರು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಸಿಹಿ ತಿಂಡಿ ವಿತರಣೆ

ಯಂಗ್ ಬ್ರೀಗೇಡ್ ಪುತ್ತೂರು, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್, ಪುತ್ತೂರು ಬ್ಲಾಕ್ ಕಾಂಗ್ರೆಸ್, ಅಲ್ಪಸಂಖ್ಯಾತ ಘಟಕ ಪುತ್ತೂರು ಇದರ ಆಶ್ರಯದಲ್ಲಿ ಈದ್ ಮಿಲಾದ್ ನ

Read More
ಕರಾವಳಿ

ಪುತ್ತೂರು: ಈದ್ ಮಿಲಾದ್ ಜಾಥಾದ ಬಳಿಕ ಪೇಟೆ ಸ್ವಚ್ಛತೆ ಮಾಡಿದ SDPI ಕಾರ್ಯಕರ್ತರು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಹಾಗೂ ಈದ್-ಮಿಲಾದ್ ಸಮಿತಿ  ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆದಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದವರಿಗೆ ಎಸ್‌ಡಿಪಿಐ ವತಿಯಿಂದ ಐಸ್‌ಕ್ರೀಂ

Read More
error: Content is protected !!