ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾದ ಉಸ್ಮಾನುಲ್ ಫೈಝಿ ತೋಡಾರುರವರಿಗೆ ಸನ್ಮಾನ
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾದ ಉಸ್ಮಾನುಲ್ ಫೈಝಿ ತೋಡಾರು ಅವರನ್ನು ಪುತ್ತೂರು ನಗರಸಭೆ ಸದಸ್ಯ ರಿಯಾಝ್ ಪರ್ಲಡ್ಕ ನೇತೃತ್ವದಲ್ಲಿ ಉಸ್ಮಾನುಲ್ ಫೈಝಿ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕ, ಅಸಂಘಟಿತ ಕಾರ್ಮಿಕ ಘಟಕದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ಬಲ್ಮಾಡ್, ವಿಟ್ಲ-ಉಪ್ಪಿನಂಗಡಿ ಯಂಗ್ ಬ್ರಿಗ್ರೇಡ್ ಉಪಾಧ್ಯಕ್ಷ ಉನೈಸ್ ಗಡಿಯಾರ, ಯಂಗ್ ಬ್ರೀಗ್ರೇಡ್ ಮುಖಂಡರಾದ ಸಿನಾನ್ ಪರ್ಲಡ್ಕ, ಬಾತೀಷ್ ಬಲ್ಮಾಡ್, ಕಾಂಗ್ರೆಸ್ ಮುಖಂಡರಾದ ಝುಬೈರ್ ಬಪ್ಪಳಿಗೆ ಉಪಸ್ಥಿತರಿದ್ದರು.

