ಮಿಲಾದ್ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದವರಿಗೆ ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಸಿಹಿ ವಿತರಣೆ: ವ್ಯಾಪಕ ಮೆಚ್ಚುಗೆ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಹಾಗೂ ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ನಡೆದ ಬೃಹತ್ ಕಾಲ್ನಡಿಗೆ
Read Moreಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಹಾಗೂ ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ನಡೆದ ಬೃಹತ್ ಕಾಲ್ನಡಿಗೆ
Read Moreವಿಟ್ಲ: ಕಂಬಳಬೆಟ್ಟು ಶಾಂತಿನಗರ ಮದ್ರಸದಲ್ಲಿ ಸಡಗರ ಸಂಭ್ರಮದಿಂದ ಈದ್ ಮಿಲಾದ್ ನಡೆಯಿತು. ಕಾರ್ಯಕ್ರಮ ಶಾಂತಿನಗರ ಇಮಾಂ ಎಂ.ಎ ಮುಹಮ್ಮದ್ ಹಾರೀಸ್ ಮದನಿ ಪಾಟ್ರಕೋಡಿಯವರ ನೇತ್ರತ್ವದಲ್ಲಿ ಮೌಲಿದ್ ಮಜ್ಲಿಸಿನೊಂದಿಗೆ
Read Moreಪುತ್ತೂರು: ಆಕರ್ಷಣ್ ಹಾಜಿಯವರ ತಾಯಿ ನಿಧನಪುತ್ತೂರು: ಕುಂಬ್ರ ನಿವಾಸಿ ರುಖ್ಯಾ ಹಜ್ಜುಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಮರೀಲ್ ನಲ್ಲಿರುವ ತನ್ನ ಮಗಳ ಮನೆಯಲ್ಲಿ ಅ.8 ರಂದು
Read Moreಪುತ್ತೂರು: ಪುತ್ತೂರಿನ ನೆಹರೂ ನಗರದಲ್ಲಿ ಕಾರ್ಯಚರಿಸುತ್ತಿದ್ದ ಝಕೀ ಫರ್ನಿಚರ್ ಅಂಗಡಿಯ ಉದ್ಯಮಿ ಆಫಾಕ್ (38) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗಡಿ ಕೋಣೆಯ ಮೇಲೆ ಇರುವ
Read Moreಮಂಗಳೂರು: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪಿಸಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಕಾಯ೯ಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಯಿತು. ಸ್ವಾತಂತ್ರ್ಯ
Read Moreಪುತ್ತೂರು: ಈಗಾಗಲೇ ಪ್ರತೀ ಗ್ರಾಪಂ ಮಟ್ಟದಲ್ಲಿ ಒಣ ಕಸ ಸಂಗ್ರಹಣಾ ಕೇಂದ್ರ ಸಿದ್ಧವಾಗಿದೆ. ಗ್ರಾಮೀಣ ಮಟ್ಟದಲ್ಲಿ ಹಸಿ ಕಸವನ್ನು ಮನೆಮನೆಗಳವರೇ ವಿಲೇವಾರಿ ಮಾಡುತ್ತಿದ್ದು, ಪ್ಲಾಸ್ಟಿಕ್ ಕಸ, ಮೆಡಿಕಲ್ ಕಸ ಮತ್ತು ಇ-ವೇಸ್ಟ್‌ಗಳನ್ನು ಗ್ರಾಪಂಗಳು ಸಂಗ್ರಹಿಸುತ್ತಿವೆ. ಸಂಗ್ರಹಿಸಿದ ಬಳಿಕ ಮುಂದಿನ ನಿರ್ವಹಣೆ ಮಾಡುವುದು ಎಲ್ಲ ಗ್ರಾಪಂಗಳಿಗೆ ಕಷ್ಟವಾದ ಕಾರಣ ಕೆದಂಬಾಡಿ ಗ್ರಾಪಂನಲ್ಲಿ 3 ತಾಲೂಕಿಗಳಿಗೆ ಸೇರಿದಂತೆ ಒಂದು ಘಟಕ ನಿರ್ಮಿಸಲಾಗುತ್ತಿದೆ ಅದೇ ಎಂ.ಆರ್.ಎಫ್ ಘಟಕ ಅಂದರೆ ಮೆಟೀರಿಯಲ್ ರಿಕವರಿ ಫೆಸಿಟಿಲಿ. ಕಾರ್ಕಳ ತಾಲೂಕಿನಲ್ಲಿ ನಿರ್ಮಿಸಲಾದ 10 ಟನ್ ಸಾಮರ್ಥ್ಯದ ಮೆಗಾ ಗಾತ್ರದ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (ಎಂಆರ್‌ಎಫ್) ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊತ್ತಮೊದಲ ಎಂಆರ್‌ಎಫ್ ಪುತ್ತೂರು ತಾಲೂಕಿಗೆ ಮಂಜೂರಾಗಿದ್ದು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಂಗಳಾಡಿ ಸಮೀಪದ ಬೋಳೋಡಿ ಎಂಬಲ್ಲಿ 5 ಟನ್ ಸಾಮರ್ಥ್ಯದ ಘಟಕ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ಮುಂದಿನ 6 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಕಾರ್ಯಾರಂಭ ಮಾಡಲಿರುವ ಈ ಘಟಕದಲ್ಲಿ ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳ ಪ್ರತೀ ಗ್ರಾಪಂಗಳಿಂದ ಒಣ ಕಸವನ್ನು ಸಂಗ್ರಹಿಸಿ ಮರುಬಳಕೆಗೆ ಮಾದರಿಗೆ ಪರಿವರ್ತಿಸಿ ಬೇರೆ ಬೇರೆ ಕಡೆಯ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಘಟಕದಿಂದಾಗಿ ಯಾವುದೇ ರೀತಿಯ ಪರಿಸರ ಮಾಲಿನ್ಯವಾಗಲಿ, ವಾಸನೆ ಸಮಸ್ಯೆಯಾಗಲಿ ಇಲ್ಲದೇ ಇರುವ ಕಾರಣ ಬೋಳೋಡಿ ಪ್ರದೇಶದ ಜನರಿಂದ ಯಾವುದೇ ಆಕ್ಷೇಪಣೆ ಬಂದಿಲ್ಲ. ಕಾರ್ಕಳದ ನಿಟ್ಟೆಯಲ್ಲಿ ನಿರ್ಮಾಣವಾಗಿರುವ ಘಟಕವನ್ನು ಕೆದಂಬಾಡಿ ಗ್ರಾಪಂ ನಿಯೋಗ ಮತ್ತು ಬೋಳೋಡಿ ಪರಿಸರದ ಜನ ಖುದ್ದಾಗಿ ಪರಿಶೀಲಿಸಿರುವ ಕಾರಣ ಕೇಂದ್ರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. 2 ಕೋಟಿ ಯೋಜನೆ:1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಎಂಆರ್‌ಎಫ್‌ನಲ್ಲಿ 5ಟನ್ ಒಣ ಕಸವನ್ನು ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸನ್ನದ್ಧಗೊಳಿಸಲಾಗುತ್ತದೆ. ಈಗಾಗಲೇ ಸರಕಾರ ಅನುದಾನ ಮಂಜೂರು ಮಾಡಿ ಕೇಂದ್ರ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೋಳೋಡಿಯಲ್ಲಿ 1 ಎಕರೆ ಜಾಗವನ್ನು ಕೆದಂಬಾಡಿ ಗ್ರಾಪಂ ಇದಕ್ಕಾಗಿ ನೀಡಿದೆ. ಕೆಲವೇ ದಿನಗಳಲ್ಲಿ ಶಿಲಾನ್ಯಾಸ ಕಾರ್ಯ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆಯಲಿದೆ. ನಿರ್ವಹಣೆ ವಿಧಾನ: ಗುತ್ತಿಗೆದಾರ ಕಂಪನಿ ಘಟಕ ನಿರ್ಮಿಸಿದ ಬಳಿಕ ಇದರ ನಿರ್ವಹಣೆಗೆ ಪ್ರತ್ಯೇಕ ಟೆಂಡರ್ ಆಹ್ವಾನಿಸಲಾಗುತ್ತದೆ. ವಹಿಸಿಕೊಂಡ ಸಂಸ್ಥೆಯವರು ಒಪ್ಪಂದದ ಆಧಾರದಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ. ಹೀಗಿರಲಿದೆ ಕಾರ್ಯವಿಧಾನ: 3 ತಾಲೂಕುಗಳ ಎಲ್ಲ ಗ್ರಾಪಂಗಳಿಂದ ಸಂಸ್ಥೆಯವರು ಒಣ ಕಸಗಳನ್ನು ಸಂಗ್ರಹಿಸುತ್ತಾರೆ. ಕಸ ಕೊಡುವುದರ ಜತೆಗೆ ನಿಗದಿ ಪಡಿಸಿದ ಮೊತ್ತವನ್ನು ಕೂಡ ಆಯಾ ಪಂಚಾಯಿತಿಯವರು ಸಂಸ್ಥೆಗೆ ನೀಡಬೇಕಾಗುತ್ತದೆ. ಸಂಗ್ರಹಗೊಂಡ ಒಣ ಕಸವನ್ನು ತಿಂಗಳಾಡಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಸಮಗ್ರವಾಗಿ ವಿಂಗಡಿಸಲಾಗುತ್ತದೆ. ಬಳಿಕ ಪ್ಲಾಸ್ಟಿಕ್ ಕಸಗಳನ್ನು ಕೂಡ ಪ್ರತ್ಯೇಕಿಸಿ ನಿರ್ದಿಷ್ಟ ಯಂತ್ರದ ಮೂಲಕ ಅವುಗಳನ್ನು ಬಂಡಲ್ ಮಾದರಿಗೆ ಪರಿವರ್ತಿಸಲಾಗುತ್ತದೆ. ಮರುಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಸಂಸ್ಕರಿಸಿದ ಬಳಿಕ ಕಾರ್ಖಾನೆಗಳಿಗೆ ಮಾರಲಾಗುತ್ತದೆ. ಗ್ರಾಮಾಂತರದ ಮೊದಲ ಘಟಕ: ಕಾರ್ಕಳದ ನಿಟ್ಟೆಯ ಘಟಕದಲ್ಲಿ ಒಂದು ಕೆ.ಜಿ. ಒಣ ತ್ಯಾಜ್ಯಕ್ಕೆ 3.50 ರೂ.ಗಳಂತೆ ಗ್ರಾಪಂಗಳು ನಿರ್ವಹಣಾ ಸಂಸ್ಥೆಗೆ ಪಾವತಿಸುತ್ತಾರೆ. ಇದು ಗ್ರಾಪಂಗಳಿಗೆ ಸುಲಭ ವಿಧಾನ. ತಾವೇ ನಿರ್ವಹಣಾ ಕಾರ್ಯ ಮಾಡುವುದು ಅತ್ಯಂತ ವೆಚ್ಚದಾಯಕ. ಇದೀಗ ತಿಂಗಳಾಡಿ ಸಮೀಪ ನಿರ್ಮಾಣವಾಗಲಿರುವ ಕೇಂದ್ರ ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊದಲನೆಯದು. ಮಂಗಳೂರಿನಲ್ಲೂ ಇಂಥದೇ ಘಟಕ ನಿರ್ಮಾಣವಾಗಲಿದೆ. ಕೆದಂಬಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಎಂಆರ್‌ಎಫ್ ನಿರ್ಮಾಣವಾಗುವ ಕಾರಣ ನಮ್ಮ ಗ್ರಾಪಂನ ತ್ಯಾಜ್ಯಗಳನ್ನು ಸಂಸ್ಥೆಯವರು ಉಚಿತವಾಗಿ ಸಂಗ್ರಹಿಸುತ್ತಾರೆ ಎನ್ನುತ್ತಾರೆ ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ
Read Moreಪುತ್ತೂರು: ವ್ಯಕ್ತಿಯೊಬ್ಬರಿಗೆ ಎಸೆದ ಬಾಟಲಿ ಇನ್ನೊಬ್ಬರಿಗೆ ತಾಗಿ ಅವರು ಗಾಯಗೊಂಡ ಘಟನೆ ಕಬಕ ಕರ್ನಾಟಕ ಬ್ಯಾಂಕ್‌ನ ಆವರಣದಲ್ಲಿ ಆ.7ರಂದು ನಡೆದಿರುವ ಬಗ್ಗೆ ವರದಿಯಾಗಿದೆ. ಕಬಕ ಪಂಜುರ್ಲಿಪಾದೆ ಉಮೇಶ್
Read Moreಪುತ್ತೂರು: ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅ.7ರಂದು ನಡೆಯಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್ ಅಬ್ದುಲ್ ಶಕೂರ್
Read Moreಪುತ್ತೂರು: ಇನ್ವರ್ಟರ್, ಬ್ಯಾಟರಿ, ಸೋಲಾರ್, ಸಿಸಿ ಟಿವಿ ಕ್ಯಾಮರಾ ಹಾಗೂ ಗೃಹೋಪಯೋಗಿ ವಸ್ತುಗಳ ಟ್ವೆಂಟಿ-ಟ್ವೆಂಟಿ ಪವರ್ ಸಿಸ್ಟಮ್ ಈಶ್ವರಮಂಗಲ ಕರ್ನಾಟಕ ಕಾಂಪ್ಲೆಕ್ಸ್‌ನಲ್ಲಿ ಅ.೬ರಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಶ್ವರಮಂಗಲಕ್ಕೆ ಹೊಸ ಉದ್ಯಮಗಳು ಬರುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿ ಶುಭಾರಂಭಗೊಂಡ ಟ್ವೆಂಟಿ-ಟ್ವೆಂಟಿ ಶೋರೂಂ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಶ್ರೀಶ ಕುಮಾರ್ ಮರಕ್ಕಡ, ಇಬ್ರಾಹಿಂ ಹಾಜಿ, ಸಿದ್ದೀಕ್, ಬಾತಿಷಾ ಈಶ್ವರಮಂಗಲ ಮತ್ತಿತರರು ಉಪಸ್ಥಿತರಿದ್ದರು. ಟ್ವೆಂಟಿ-ಟ್ವೆಂಟಿ ಸಂಸ್ಥೆಯ ಮಾಲಕ ಮೊಯ್ದೀನ್ ಅವರು ಸ್ವಾಗತಿಸಿ ಮಾತನಾಡಿ ಕಾಸರಗೋಡು ಜಿಲ್ಲೆಯಲ್ಲಿ ಮತ್ತು ಕರ್ನಾಟಕದ ದ.ಕ ಜಿಲ್ಲೆಯಲ್ಲಿ ೧೯೯೭ರಲ್ಲಿ ಪ್ರಾರಂಭಗೊಂಡ ಯುವರ್ ಚಾಯಿಸ್ ನೂತನ ಸಂಸ್ಥೆಯಾದ ಟ್ವೆಂಟಿ ಟ್ವೆಂಟಿ ಪವರ್ ಸಿಸ್ಟಮ್‌ನ ಎರಡನೇ ಶೋರೂಂ ಇಲ್ಲಿ ಶುಭಾರಂಭಗೊಂಡಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.
Read Moreಪುತ್ತೂರು: ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮವನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿಕೊಳ್ಳುವಂತೆ ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ. ಪುತ್ತೂರು ತಾಲೂಕು ವಿಭಾಗವಾಗಿ ಕಡಬ ತಾಲೂಕು ಪ್ರತ್ಯೇಕ ರಚನೆ ಆದಾಗ ಕಡಬಕ್ಕೆ ದೂರದಲ್ಲಿರುವ ಮತ್ತು ಪುತ್ತೂರಿಗೆ ಹತ್ತಿರ ಇರುವ ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮಗಳನ್ನು ಕಡಬಕ್ಕೆ ಸೇರ್ಪಡೆ ಮಾಡಲಾಗಿದ್ದು ಇದನ್ನು ಕೈಬಿಟ್ಟು ಪುತ್ತೂರು ತಾಲೂಕಿನಲ್ಲೇ ಈ ಗ್ರಾಮಗಳನ್ನು ಉಳಿಸಬೇಕು ಎಂದು ಒತ್ತಾಯಿಸಿ ಪಾಲ್ತಾಡಿ ಗ್ರಾಮ ಪುತ್ತೂರು ತಾಲೂಕು ಸೇರ್ಪಡೆ ಹೋರಾಟ ಸಮಿತಿಯಿಂದ ಸಹಾಯಕ ಕಮೀಷನರ್‌ಗೆ ಮನವಿ ಮಾಡಲಾಗಿದ್ದು ಪುತ್ತೂರಿಗೆ 18 ಕಿ.ಮೀ. ಕಡಬಕ್ಕೆ 60 ಕಿ.ಮೀ. ದೂರ ಇರುವ ಅಂತರವನ್ನು ಗಮನಿಸಿ ಬಡವರಿಗೆ ದುಂದು ವೆಚ್ಚ ಮತ್ತು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮವನ್ನು ಪುತ್ತೂರು ತಾಲೂಕಿನಲ್ಲೇ ಉಳಿಸುವಂತೆ ಒತ್ತಾಯಿಸಲಾಗಿದೆ. ಪಾಲ್ತಾಡಿ ಗ್ರಾಮ ಪುತ್ತೂರು ತಾಲೂಕು ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಕರ್ನಾಟಕ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್, ಹೋರಾಟ ಸಮಿತಿ ಕಾರ್ಯದರ್ಶಿ ಯಶೋದಾ ಹಾಗು ಸಮಿತಿ ಮುಖಂಡರುಗಳಾದ ಪುಷ್ಪ ರೇಖಲತಾ, ಬಾಬು, ಉದಯ, ದಲಿತ ಹಕ್ಕು ಹೋರಾಟ ಸಮಿತಿ ಮುಖಂಡೆ ಈಶ್ವರಿ ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು
Read More