ಆಲಂಕಾರು: ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ, ಅನಾಥವಾದ ಮಗು
ಕಡಬ: ಪತ್ನಿಯನ್ನು ಕೊಲೆಗೈದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.20ರಂದು ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಎಂಬಲ್ಲಿ ನಡೆದಿದೆ.

ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಮೂಲತಃ ಕಾರ್ಕಳ ಬಜಗೋಳಿ ನಿವಾಸಿ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತಾ ಮೃತಪಟ್ಟವರು.
ದಂಪತಿ ಆಲಂಕಾರು ಕಜೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಳೆದ ತಿಂಗಳಷ್ಟೇ ಹೋಟೆಲ್ ಉದ್ಯಮವನ್ನು ಸ್ಥಗಿತಗೊಳಿಸಿ ಊರಿಗೆ ಹಿಂತಿರುಗಿದ್ದರು ಎನ್ನಲಾಗಿದೆ. ಜೂ.19ರಂದು ಸಂಜೆ ಆಲಂಕಾರು ಕಡೆಯ ಬಾಡಿಗೆ ಮನೆಗೆ ದಂಪತಿ ಮತ್ತೆ ಬಂದಿದ್ದರು. ಜೂ.20ರಂದು ಘಟನೆ ನಡೆದಿದ್ದು, ಮನೆಯ ಒಳಗಿನ ಚಿಲಕ ಹಾಕಲಾಗಿತ್ತು.
ಪತ್ನಿಯನ್ನು ಕೊಲೆಗೈದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇವರಿಗೆ ಎರಡು ವರ್ಷದ ಹೆಣ್ಣು ಮಗುವಿದ್ದು, ಘಟನೆಯ ಆರಿವಿಲ್ಲದೆ ಮನೆಯಲ್ಲಿ ಅತ್ತು ಸುಸ್ತಾಗಿ ನಿದ್ದೆಗೆ
ಜಾರಿತ್ತು.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಸಂಬಂಧಿ ಸುಮಲತಾ ಎಂಬವರು ನೀಡಿದ ದೂರಿನ ಮೇರೆಗೆ ಕಡಬ





