ಕರಾವಳಿ

ಈಡನ್ ಗ್ಲೋಬಲ್ ಶಿಕ್ಷಣ ಸಂಸ್ಥೆಗೆ ‘ಮೀಫ್’ ಎಕ್ಸಲೆನ್ಸ್ ಅವಾರ್ಡ್



ಪುತ್ತೂರು: ಮೀಫ್ ಶೈಕ್ಷಣಿಕ ಸಂಸ್ಥೆ ಒಕ್ಕೂಟದ ಆಶ್ರಯದಲ್ಲಿ ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉ.ಕನ್ನಡ ಮತ್ತು ಹಾಸನ ಜಿಲ್ಲೆಗಳನ್ನೊಳಗೊಂಡ ಶಾಲೆಗಳಲ್ಲಿ 2025-26 ಶೈಕ್ಷಣಿಕ ವರ್ಷದಲ್ಲಿ  100% ಫಲಿತಾಂಶ ಸಾಧಿಸಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಎಕ್ಸಲೆನ್ಸ್ ಪ್ರಶಸ್ತಿಯನ್ನು ಬೆಳಂದೂರಿನ ಈಡನ್ ಗ್ಲೋಬಲ್ ಶಾಲೆಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ ಹಾಗೂ ಪ್ರಾಂಶುಪಾಲರಾದ ರಂಝಿ ಮುಹಮ್ಮದ್ ರವರು ಸ್ವೀಕರಿಸಿದರು.


ಈಡನ್ ಗ್ಲೋಬಲ್ ಸಂಸ್ಥೆಯು ಕಳೆದ ಏಳು ವರ್ಷಗಳಿಂದ ನಿರಂತರವಾಗಿ 100% ಫಲಿತಾಂಶ ಸಾಧಿಸಿ ಸಾರ್ವಜನಿಕ ವಲಯದಲ್ಲಿ ಅಪಾರ ಮನ್ನಣೆ ಗಳಿಸಿ ಶೈಕ್ಷಣಿಕ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಈ ಭಾರಿ ವಿದ್ಯಾರ್ಥಿಗಳ ಅಂಕ 600ರ ಗಡಿ ದಾಟಿ 42% ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಪಡೆದಿದ್ದಾರೆ. ಪೋಷಕರು ಮತ್ತು ವಿದ್ಯಾರ್ಥಿಗಳ ಕನಸನ್ನು ಈಡನ್ ಸಂಸ್ಥೆ ನನಸಾಗಿಸುತ್ತಾ ಸತತ 7 ವರ್ಷಗಳಿಂದ ಯಶಸ್ವಿಯಾಗಿದೆ.

 


ಅತ್ಯುತ್ತಮ ಫಲಿತಾಂಶಕ್ಕಾಗಿ ಕಠಿಣ ಪರಿಶ್ರಮ ನಡೆಸಿದ ವಿದ್ಯಾರ್ಥಿಗಳು, ಪ್ರಾಂಶುಪಾಲರು, ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ಶಿಕ್ಷಕರು, ಪೋಷಕರು ಮತ್ತು ಸಿಬ್ಬಂದಿ ವರ್ಗವನ್ನು ಅಲೀಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರ್, ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು,ಕೋಶಾಧಿಕಾರಿ  ನಿಝರ್ ದರ್ಬೆ, ಟ್ರಸ್ಟ್ ಸದಸ್ಯರುಗಳಾದ ಪುತ್ತು ಬಾವ ಹಾಜಿ ಸವಣೂರು,ಖಾದರ್ ಹಾಜಿ ಸವಣೂರು,,ಅಬ್ದುಲ್ ಹಮೀದ್ ಹಾಜಿ ಬೈತಡ್ಕ, ಇಸ್ಮಾಯಿಲ್ ಹಾಜಿ ಬೈತಡ್ಕ, ಮುಸ್ತಫಾ ಸಅದಿ ಪುತ್ತೂರು, ಅಬ್ಬಾಸ್ ಬಾವ ಹಾಜಿ ನೆಕ್ಕರೆ, ಮುಹಮ್ಮದ್ ಹಾಜಿ ನಡುಪದವು, ಅಶ್ರಫ್ ಕೆಕುಡೆ ಅವರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!