ಮಾಜಿ ಜಿ.ಪಂ ಸದಸ್ಯರೋರ್ವರ ಪುತ್ರಿಯ ಮೂತ್ರಕೋಶದ ನಾಳದಲ್ಲಿ ತೊಂದರೆ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಕುಟುಂಬ
ಪುತ್ತೂರು: ಕೆಯ್ಯೂರು ಕೆಪಿಎಸ್‌ನ ಆಂಗ್ಲ ಮಾಧ್ಯಮ ವಿಭಾಗದ ೨ ತರಗತಿಯಲ್ಲಿ ಕಲಿಯುತ್ತಿರುವ ಪುಟ್ಟ ಬಾಲಕಿಯೋರ್ವಳಿಗೆ ಮೂತ್ರಕೋಶದ ನಾಳದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ತುರ್ತು ಶಸ್ತ್ರ ಚಿಕಿತ್ಸೆ ಆಗಬೇಕಾಗಿದೆ ಎಂದು ವೈದ್ಯರ ನೀಡಿದ ಸೂಚನೆಯಂತೆ ಶಸ್ತ್ರಚಿಕಿತ್ಸೆಗೆ ಸಹೃದಯಿ ದಾನಿಗಳು ಧನ ಸಹಾಯ ಮಾಡುವಂತೆ ಕೆಯ್ಯೂರು ಕೆ.ಪಿ.ಎಸ್‌ನ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಬಾಬುರವರು ಅ.11ರಂದು ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಕೆಯ್ಯೂರು ಗ್ರಾಮ ಸಭೆಯಲ್ಲಿ ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿ.ಪಕೀರ ಎಂ.ರವರು ಪುತ್ರಿಯಾಗಿರುವ ಯುಕ್ತಾ ಪಿ.ಡಿ ಇವರು ಕೆಯ್ಯೂರು ಕೆಪಿಎಸ್‌ನಲ್ಲಿ 2 ತರಗತಿಯಲ್ಲಿ ಕಲಿಯುತ್ತಿದ್ದಾರೆ. ಇವಳಿಗೆ ಮೂತ್ರಕೋಶದ ನಾಳದಲ್ಲಿ ತೊಂದರೆಯಾಗಿದ್ದು ಮಂಗಳೂರಿನ ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ತೋರಿಸಿ, ಸಿಟಿ ಸ್ಕ್ಯಾನ್ ಮಾಡಿದಾಗ ಮೂತ್ರಕೋಶದ ನಾಳದ ಮಧ್ಯದಲ್ಲಿ ಚಿಕ್ಕದಾಗಿದ್ದು ತಕ್ಷಣ ಸರ್ಜರಿ ಮಾಡಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಮಗುವಿನ ತಾಯಿಗೆ ಯಾವುದೇ ಉದ್ಯೋಗ ಇಲ್ಲದೇ ಇರುವುದರಿಂದ ಶಸ್ತ್ರಚಿಕಿತ್ಸೆಗೆ ಸುಮಾರೂ.1 ಲಕ್ಷದ 30 ಸಾವಿರ ರೂ. ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು ಆದ್ದರಿಂದ ದಾನಿಗಳು ಧನ ಮಾಡುವಂತೆ ಶಾಲಾ ಪರವಾಗಿ ಅವರು ಕೇಳಿಕೊಂಡರು. ಈ ಬಗ್ಗೆ ವಾಟ್ಸಫ್‌ನಲ್ಲಿ ಶಾಲಾ ಪರವಾಗಿ ಮನವಿ ಪತ್ರವನ್ನು ಕೂಡ ಹರಿಯಬಿಟ್ಟಿದ್ದಾರೆ. ಸಭೆಯಲ್ಲಿದ್ದ ಮಗುವಿನ ತಾಯಿ ಧರಣಿಯವರು ಮಾತನಾಡಿ, ಈಗಾಗಲೇ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದ್ದೇನೆ. ನನ್ನ ಮಗುವಿನ ಮೂತ್ರಕೋಶದ ನಾಳದ ಮಧ್ಯದಲ್ಲಿ ಚಿಕ್ಕದಾಗಿದ್ದು ಕೂಡಲೇ ಸರ್ಜರಿ ಮಾಡಬೇಕೆಂದು ಮಂಗಳಾ ಕಿಡ್ನಿ ಫೌಂಡೇಶನ್‌ನ ವೈದ್ಯರು ತಿಳಿಸಿದ್ದಾರೆ. ಹಣದ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
1 ತಿಂಗಳ ಗೌರವಧನ ಪಾವತಿಸಿ ಪಂಚಾಯತ್ ಸದಸ್ಯರುಗಳು
ಕೆಯ್ಯೂರು ಗ್ರಾಪಂನಿಂದ 10 ಸಾವಿರ ರೂ. ನೀಡುವುದಾಗಿ ಈಗಾಗಲೇ ತಿಳಿಸಲಾಗಿದೆ ಎಂದು ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹೇಳಿದರು. ಇದೇ ವೇಳೆ ಮಾತನಾಡಿದ ಜಯಂತ ಪೂಜಾರಿ ಕೆಂಗುಡೇಲುರವರು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಒಪ್ಪಿಗೆಯಂತೆ ಸದಸ್ಯರುಗಳ ಒಂದು ತಿಂಗಳ ಗೌರವಧನ ಒಟ್ಟು 15 ಸಾವಿರ ರೂ.ಅನ್ನು ಮಗುವಿನ ಶಸ್ತ್ರಚಿಕಿತ್ಸೆಗೆ ನೀಡುವುದಾಗಿ ತಿಳಿಸಿದರು.
ಸಹಾಯಕ್ಕೆ ಮನವಿ
ಧನ ಸಹಾಯ ಮಾಡುವ ದಾನಿಗಳು ಬ್ಯಾಂಕ್ ಆಫ್ ಬರೋಡ ಕುಂಬ್ರ ಶಾಖೆಗೆ ಧನ ಸಹಾಯ ಮಾಡಬಹುದು. ಧರಣಿ ಸಿ.ಬಿ, ಖಾತೆ ಸಂಖ್ಯೆ -70720100002621, ಐಎಫ್‌ಎಸ್‌ಸಿ ಕೋಡ್ -BARB0VJKUMB ಮೊ.ನಂ. 7760372689