ಕರಾವಳಿರಾಜಕೀಯ

ಬ್ಲಾಕ್ ಕಾಂಗ್ರೆಸ್ ಸಭೆಗೆ ಶಕುಂತಳಾ ಶೆಟ್ಟಿ ಗೈರು


ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅ.10 ರಂದು ನಡೆದ ಸಭೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಗೈರಾಗಿದ್ದಾರೆ.


ಕೆಲದಿನಗಳ ಹಿಂದೆ ಕಚೇರಿಯಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮಕ್ಕೆ ಸಂಘಪರಿವಾರದ ಪಿರೋಹಿತರೋರ್ವರನ್ನು ಕರೆಸಿದ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇಸ್ಲಾಂ‌ಧರ್ಮದ ಅವಹೇಳನ ಮಾಡಿದ್ದ ಕೋಮುವಾದಿ ಪುರೋಹಿತರ ಕರೆಸಿ ಪೂಜೆ ಮಾಡಿದ್ದಕ್ಕೆ ಕೈ ಕಾರ್ಯಕರ್ತರು ಗರಂ ಆಗಿದ್ದರು.

ಬಳಿಕದ ಬೆಳವಣಿಗೆಯಲ್ಲಿ ಬ್ಲಾಕ್ ಅಧ್ಯಕ್ಷರು ಕ್ಷಮೆಯನ್ನು ಕೇಳಿದ್ದರು. ಅ.10 ರಂದು ಬ್ಲಾಕ್ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುವುದು ನಿಶ್ಚಿತವಾಗಿತ್ತು.‌ಸಭೆಗೆ ಶಕುಂತಳಾ ಶೆಟ್ಟಿ ಮತ್ತು ಕಾರ್ಯದರ್ಶಿಯೋರ್ವರು ಗೈರಾಗಿದ್ದಾರು. ಶಕುಂತಳಾ ಶೆಟ್ಟಿ ಗೋವಾಗೆ ತೆರಳಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಸಭೆಗೆ ತಿಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!