ಈಶ್ವರಮಂಗಲ: ‘ಇಲಲ್ ಮದೀನಾ ಸ್ಕ್ವಯರ್’ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಉಮರ್ ಜಿಫ್ರಿ ತಂಗಳ್ ಆಯ್ಕೆ
ಪುತ್ತೂರು: ತ್ವೈಬ ಎಜುಕೇಶನ್ ಸೆಂಟರ್‌ನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಇಲಲ್ ಮದೀನ ಸ್ಕ್ವಯರ್ ಮೀಲಾದ್ ಕಾರ್ಯಕ್ರಮ ಈ ವರ್ಷವೂ ನಡೆಸುವುದಕ್ಕಾಗಿ ಸ್ವಾಗತ ಸಮಿತಿ ರಚಿಸಲಾಯಿತು. ಮೀಲಾದ್
Read Moreಪುತ್ತೂರು: ತ್ವೈಬ ಎಜುಕೇಶನ್ ಸೆಂಟರ್‌ನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಇಲಲ್ ಮದೀನ ಸ್ಕ್ವಯರ್ ಮೀಲಾದ್ ಕಾರ್ಯಕ್ರಮ ಈ ವರ್ಷವೂ ನಡೆಸುವುದಕ್ಕಾಗಿ ಸ್ವಾಗತ ಸಮಿತಿ ರಚಿಸಲಾಯಿತು. ಮೀಲಾದ್
Read Moreಪುತ್ತೂರು: ಭಾರೀ ಮಳೆಯಿಂದಾಗಿ ಹಾನಿಗೀಡಾದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾ.ಪಂ ವ್ಯಾಪ್ತಿಯ ಮನೆಗೆ ರೂ.50 ಸಾವಿರ ಮೊತ್ತವನ್ನು ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾರವರ ಮನವಿಯ ಮೇರೆಗೆ ಶಾಸಕ ಜಮೀರ್ ಅಹ್ಮದ್ ಅವರು ನೀಡಿದ್ದಾರೆ. ಜಮೀರ್ ಅಹ್ಮದ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ನಫೀಸಾರವರು ಮಳೆಯಿಂದ ಮನೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿ ಪರಿಹಾರ ಒದಗಿಸುವಂತೆ ಕೇಳಿಕೊಂಡಿದ್ದು ಇದಕ್ಕೆ ತಕ್ಷಣ ಸ್ಪಂಧಿಸಿದ ಜಮೀರ್ ಅಹ್ಮದ್ ಅವರು ರೂ.50 ಸಾವಿರ ನಗದು ಮೊತ್ತವನ್ನು ನೀಡಿದರು. ಗ್ರಾ.ಪಂ ಸದಸ್ಯೆ ರಶ್ಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Read Moreಮಂಗಳೂರು: ಖಾಸಗಿ ಕಾಲೇಜಿನ ಹಾಸ್ಟೆಲ್ ಕಿಟಕಿ ಮುರಿದು ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮೂವರು ವಿದ್ಯಾರ್ಥಿನಿಯರು ಮಂಗಳೂರು ರೈಲು ನಿಲ್ದಾಣ ಮೂಲಕ ಕೊಯಂಬತ್ತೂರಿಗೆ ಪ್ರಯಾಣಿಸಿರುವ ಬಗ್ಗೆ
Read Moreಪುತ್ತೂರು: ಕನ್ಯಾಕುಮಾರಿಯಿಂದ ಪ್ರಾರಂಭಗೊಂಡು ಕಾಶ್ಮೀರದ ತನಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ದಿನಾಂಕ 30 ರಂದು ಕರ್ನಾಟಕ ಪ್ರವೇಶಿಸಲಿದ್ದು ಆ ಪ್ರಯುಕ್ತ ಸರ್ವೆ
Read Moreನವದೆಹಲಿ: ರಾಷ್ಟ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಇತರ ರಾಜ್ಯಗಳ ಪಿಎಫ್
Read Moreಪುತ್ತೂರು: ಪರಿಶುದ್ಧ ಇಸ್ಲಾಂ ಧರ್ಮವು ಎಂದಿಗೂ ಅಸಹಿಷ್ಣತೆಯನ್ನು ಸಹಿಸದ ಧರ್ಮವಾಗಿದೆ ಎಂದು ಪಾಣಕ್ಕಾಡ್ ಅಸ್ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಹೇಳಿದರು. ಮಾಡನ್ನೂರು ನೂರುಲ್ ಹುದಾ ಪ್ರಚಾರ ಅಭಿಯಾನದ ಅಂಗವಾಗಿ ಅಕಾಡೆಮಿಯ ಕ್ಯಾಂಪಸ್‌ನಲ್ಲಿ ನಡೆದ ಲೀಡರ‍್ಸ್ ಸಮ್ಮಿಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ನೂರುಲ್ ಹುದಾ ವಿದ್ಯಾಸಂಸ್ಥೆ ಬರೀ ಏಳು ವರ್ಷಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಮುಂದಕ್ಕೆ ಈ ಸಂಸ್ಥೆಯನ್ನು ಇನ್ನಷ್ಟು ಶಕ್ತಿಯುತವಾಗಿ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕೆಂದು ಅವರು ಹೇಳಿದರು. ಸಂಸ್ಥೆಯ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ಕರುನಾಡ ಮಣ್ಣಿನಲ್ಲಿ ಸಮನ್ವಯ ಶಿಕ್ಷಣಕ್ಕೆ ತನ್ನದೇ ಆದ ಗುರಿಯೊಂದಿಗೆ ಹೆಜ್ಜೆಯನ್ನಿಟ್ಟಿರುವ ನೂರುಲ್ ಹುದಾ ವಿದ್ಯಾಸಂಸ್ಥೆಯು ಸಹೃದಯಿಗಳ ಸಹಕಾರದ ಫಲವಾಗಿ ಕೇವಲ ಏಳು ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ವಿದ್ಯಾಭ್ಯಾಸ ಮಂಡಳಿ ಕಾಸರಗೋಡು ಜಿಲ್ಲಾ ಪ್ರ.ಕಾರ್ಯದರ್ಶಿ ಸೈಯ್ಯದ್ ಹುಸೈನ್ ತಂಙಳ್ ಮಾಸ್ತಿಕುಂಡು ಪ್ರಾರ್ಥಿಸಿದರು. ಸೈಯ್ಯದ್ ಬುರ್ಹಾನ್ ಅಲೀ ತಂಙಳ್, ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಸಂಸ್ಥೆಯ ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ, ಮಂಗಳ ಅಬೂಬಕ್ಕರ್ ಹಾಜಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ನಿವೃತ್ತ ಎಎಸ್ಸೈ ಎಂ.ಡಿ ಹಸೈನಾರ್, ರಶೀದ್ ಹಾಜಿ ಪರ್ಲಡ್ಕ. ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಎನ್.ಎಸ್ ಅಬ್ದುಲ್ ಹಾಜಿ ಈಶ್ವರಮಂಗಳ, ಆದಂ ಹಾಜಿ ಕಮ್ಮಾಡಿ, ಹಕೀಂ ಪರ್ತಿಪ್ಪಾಡಿ, ಹಮೀದ್ ಮುಸ್ಲಿಯಾರ್ ಮಡಿಕೇರಿ, ಹಂಝ ಹಾಜಿ ಕುಶಾಲನಗರ, ಮೂಸಾ ಕುದ್ಕುಪದವು, ಬಾತಿಷಾ ಹಾಜಿ ಪಾಟ್ರಕೋಡಿ ಅಶ್ರಫ್ ಹಾಜಿ ಪಳ್ಳತ್ತೂರು, ತಾಜ್ ಮಹಮ್ಮದ್, ಸಿ.ಎಚ್, ಅಬ್ದುಲ್ ಅಝೀಝ್ ಹಾಜಿ, ಇಬ್ರಾಹಿಂ ಹಾಜಿ ಮಂಡೆಕೋಲು, ಹಸೈನ್ ಹಾಜಿ ಸಿಟಿ ಬಜಾರ್, ಕೆ.ಕೆ ಇಬ್ರಾಹಿಂ ಹಾಜಿ, ಹಮೀದ್ ಹಾಜಿ ಸುಳ್ಯ, ಅಬ್ದುಲ್ ರಝಾಕ್ ಆತೂರು, ಹಾಶಿಂ ದಾರಿಮಿ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಮುಹಮ್ಮದ್ ಒಮೇಗಾ, ಫಕ್ರುದ್ದೀನ್ ಹಾಜಿ ಕೊಯ್ಲ, ಸಲಾಂ ಪದಡ್ಕ, ಇಸಾಕ್ ಪಡೀಲ್, ಉಮರ್ ಸುಳ್ಯ, ಬಶೀರ್ ಸಿದ್ದಾಪುರ ಮುಂತಾದ ಹಲವಾರು ಗಣ್ಯರು ಭಾಗವಹಿಸಿದ್ದರು. ಸಂಸ್ಥೆಯ ಮ್ಯಾನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೊಲ್ಪೆ ಸ್ವಾಗತಿಸಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯು ಕ್ಷಿಪ್ರ ಅವಧಿಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಸಂಸ್ಥೆಗೆ ಈಗಾಗಲೇ ಅದೆಷ್ಟೋ ಮಂದಿ ಪ್ರತಿಫಲಾಪೇಕ್ಷೆಯಿಲ್ಲದೇ ಸಹಕಾರ ನೀಡುತ್ತಿದ್ದು ಸಂಸ್ಥೆಯ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ವಿದ್ಯಾಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ವಿದ್ಯಾಸಂಸ್ಥೆಯನ್ನು ಭವಿಷ್ಯದಲ್ಲಿ ಇನ್ನಷ್ಟು ಸಧೃಢವಾಗಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ. -ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಮ್ಯಾನೇಜರ್
Read Moreಪುತ್ತೂರು: ಸಾಲ ಮನ್ನಾ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ನೇತೃತ್ವದ ನಿರ್ದೇಶಕರ ನಿಯೋಗ ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರನ್ನು ಸೆ.19ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಿಯಮಾನುಸಾರ 650 ಸದಸ್ಯರು ಸಾಲ ಮನ್ನಾ ಯೋಜನೆಗೆ ಅರ್ಹರಿದ್ದು ಸದ್ರಿ ದಾಖಲಾತಿಯಲ್ಲಿ 401 ಸದಸ್ಯರಿಗೆ ಸಾಲ ಮನ್ನಾ ಯೋಜನೆಯ ಸೌಲಭ್ಯವು ಸಿಕ್ಕಿರುತ್ತದೆ. ಉಳಿದ ಫಲಾನುಭವಿಗಳಿಗೆ ಸಾಲ ಮನ್ನಾ ಸೌಲಭ್ಯವು ಸಿಗದೇ ಇರುವ ಕಾರಣ ಈ ಬಗ್ಗೆ ಶಾಸಕ ಸಂಜೀವ ಮಠಂದೂರುರವರಲ್ಲಿ ವಿಚಾರ ತಿಳಿಸಿದಾಗ ಶಾಸಕರ ಪ್ರಯತ್ನಿದಿಂದ 169ಜನ ಸದಸ್ಯರ ಹೆಸರು ಹಸಿರು ಪಟ್ಟಿಗೆ ಬಂದಿದ್ದು ಹಣ ಬಿಡುಗಡೆಗೆ ಬಾಕಿ ಇರುತ್ತದೆ. ಇನ್ನೂ 80 ಜನ ಸದಸ್ಯರ ಹೆಸರು ಹಸಿರುಪಟ್ಟಿಗೆ ಸೇರಲು ಬಾಕಿ ಇದೆ. ಅವರ ಹೆಸರನ್ನು ತಕ್ಷಣ ಹಸಿರುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಬಾಬು ಶೆಟ್ಟಿ ನೇತೃತ್ವದ ನಿಯೋಗ ಸಹಕಾರ ಸಚಿವರಲ್ಲಿ ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ನಿರ್ದೇಶಕರಾದ ಪರಮೇಶ್ವರ ಭಂಡಾರಿ, ಶಿವರಾಮ, ನಾರಾಯಣ ಪೂಜಾರಿ, ವಿಶ್ವನಾಥ ನಾಯ್ಕ, ಹಸನ್ ಎ, ನಾಗಮ್ಮ, ಬಾಲಕೃಷ್ಣ ಗೌಡ, ಯಮುನಾ, ಲತಾಮೋಹನ ಹಾಗೂ ಸಿಬ್ಬಂದಿ ರೋಹಿತ್‌ರವರು ನಿಯೋಗದಲ್ಲಿದ್ದರು. *ಭರವಸೆ* ಸಾಲ ಮನ್ನಾ ಹಣ ಬಿಡುಗಡೆಯಾಗದೆ ಹಲವು ಫಲಾನುಭವಿಗಳಿಗೆ ತೊಂದರೆಯಾಗಿರುವ ಬಗ್ಗೆ ತಿಳಿದಿದೆ. ರಾಜ್ಯದಲ್ಲಿ ಒಟ್ಟು 10,500 ಮಂದಿಯ ಹೆಸರು ಗ್ರೀನ್ ಲಿಸ್ಟ್‌ನಲ್ಲಿದ್ದು ಹಣ ಬಿಡುಗಡೆಗೆ ಬಾಕಿ ಇದೆ. ಪುತ್ತೂರಿನ ಸಮಸ್ಯೆ ಹಾಗೂ ನಿಮ್ಮ ಬೇಡಿಕೆ ಬಗ್ಗೆ ಶಾಸಕ ಸಂಜೀವ ಮಠಂದೂರು ಈ ಮೊದಲೇ ನನ್ನ ಗಮನಕ್ಕೆ ತಂದಿದ್ದರು. ಮುಂದಿನ ದಿನಗಳಲ್ಲಿ ಸಾಲ ಮನ್ನಾ ಹಣ ಬಿಡುಗಡೆಯಾಗಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್‌ರವರು ನಿಯೋಗಕ್ಕೆ ಭರವಸೆ ನೀಡಿದರು.
Read Moreಸುಳ್ಯ: ಬೆಳ್ಳಾರೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಂದ ಸೋಣಂಗೇರಿ ಬಳಿ ಮಹಿಳೆಯೋರ್ವರು ಇಳಿಯುವ ಸಂದರ್ಭ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಸೋಣಂಗೇರಿಯಲ್ಲಿ ನಡೆದಿದೆ. ಮಹಿಳೆ
Read Moreಪುತ್ತೂರು: ಕುಂಬ್ರ ನ್ಯೂ ರಾಯಲ್ ದರ್ಬಾರ್ ಹೊಟೇಲ್ ಬಳಿ ನಿಲ್ಲಿಸಲಾಗಿದ್ದ ಆಕ್ಟಿವಾ ಸ್ಕೂಟರನ್ನು ಕಳವು ಮಾಡಲು ಯತ್ನಿಸಿದ ಘಟನೆ ಸೆ.18ರಂದು ರಾತ್ರಿ ನಡೆದಿದ್ದು ಕಳವಿಗೆ ಯತ್ನ ನಡೆಸಿದ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ರಾಯಲ್ ದರ್ಬಾರ್ ಹೊಟೇಲ್ ಮಾಲಿಕ ಹಮೀದ್ ರವರು ತನ್ನ ಸ್ಕೂಟರನ್ನು ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನಿಂದ ಬರುವಾಗ ತಡವಾಗಿರುವ ಕಾರಣ ಸ್ಕೂಟರ್ ಕೊಂಡು ಹೋಗಿರಲಿಲ್ಲ. ಅದೇ ದಿನ ರಾತ್ರಿ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಯುವಕರು ಸ್ಕೂಟರನ್ನು ಕಳವು ಮಾಡಲು ಯತ್ನ ನಡೆಸಿದ್ದಾರೆ. ಹೊಟೇಲ್ ಮಾಲಿಕರು ಸ್ಕೂಟರ್‌ನ ಹ್ಯಾಂಡ್ ಲಾಕ್ ಮಾಡಿರುವ ಕಾರಣ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಆದರೂ ಸ್ಕೂಟರಿನಲ್ಲಿದ್ದ ಹೆಲ್ಮೆಟನ್ನು ಕಳವು ಮಾಡಿದ್ದು ಹಳೆಯ ಹೆಲ್ಮೆಟ್ ಅಲ್ಲಿ ಇಟ್ಟು ತೆರಳಿದ್ದಾರೆ. ಹ್ಯಾಂಡ್ ಲಾಕ್ ಹಾಕಿರುವ ಕಾರಣ ಕಳ್ಳತನ ಮಾಡಲು ಸಾಧ್ಯವಾಗಿಲ್ಲ.
Read Moreಪುತ್ತೂರು: ಮೇನಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್’ನ ಶಾಮಿಲ್ ಮಧುರಾ ಅಬ್ದುಲ್ ಖಾದರ್ ಹಿರಿಯರ ವಿಭಾಗದ ಹಿಂದಿ ಕಂಠಪಾಠ ಸ್ವರ್ಧೆಯಲ್ಲಿ ಪ್ರಥಮ
Read More