ಕರಾವಳಿ

ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಭೇಟಿ



ಪುತ್ತೂರು: ಸಾಲ ಮನ್ನಾ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ನೇತೃತ್ವದ ನಿರ್ದೇಶಕರ ನಿಯೋಗ ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರನ್ನು ಸೆ.19ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

 ನಿಯಮಾನುಸಾರ 650 ಸದಸ್ಯರು ಸಾಲ ಮನ್ನಾ ಯೋಜನೆಗೆ ಅರ್ಹರಿದ್ದು ಸದ್ರಿ ದಾಖಲಾತಿಯಲ್ಲಿ 401 ಸದಸ್ಯರಿಗೆ ಸಾಲ ಮನ್ನಾ ಯೋಜನೆಯ ಸೌಲಭ್ಯವು ಸಿಕ್ಕಿರುತ್ತದೆ. ಉಳಿದ ಫಲಾನುಭವಿಗಳಿಗೆ ಸಾಲ ಮನ್ನಾ ಸೌಲಭ್ಯವು ಸಿಗದೇ ಇರುವ ಕಾರಣ ಈ ಬಗ್ಗೆ ಶಾಸಕ ಸಂಜೀವ ಮಠಂದೂರುರವರಲ್ಲಿ ವಿಚಾರ ತಿಳಿಸಿದಾಗ ಶಾಸಕರ ಪ್ರಯತ್ನಿದಿಂದ 169ಜನ ಸದಸ್ಯರ ಹೆಸರು ಹಸಿರು ಪಟ್ಟಿಗೆ ಬಂದಿದ್ದು ಹಣ ಬಿಡುಗಡೆಗೆ ಬಾಕಿ ಇರುತ್ತದೆ. ಇನ್ನೂ 80 ಜನ ಸದಸ್ಯರ ಹೆಸರು ಹಸಿರುಪಟ್ಟಿಗೆ ಸೇರಲು ಬಾಕಿ ಇದೆ. ಅವರ ಹೆಸರನ್ನು ತಕ್ಷಣ ಹಸಿರುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಬಾಬು ಶೆಟ್ಟಿ ನೇತೃತ್ವದ ನಿಯೋಗ ಸಹಕಾರ ಸಚಿವರಲ್ಲಿ ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ನಿರ್ದೇಶಕರಾದ ಪರಮೇಶ್ವರ ಭಂಡಾರಿ, ಶಿವರಾಮ, ನಾರಾಯಣ ಪೂಜಾರಿ, ವಿಶ್ವನಾಥ ನಾಯ್ಕ, ಹಸನ್ ಎ, ನಾಗಮ್ಮ, ಬಾಲಕೃಷ್ಣ ಗೌಡ, ಯಮುನಾ, ಲತಾಮೋಹನ ಹಾಗೂ ಸಿಬ್ಬಂದಿ ರೋಹಿತ್‌ರವರು ನಿಯೋಗದಲ್ಲಿದ್ದರು.

*ಭರವಸೆ*

ಸಾಲ ಮನ್ನಾ ಹಣ ಬಿಡುಗಡೆಯಾಗದೆ ಹಲವು ಫಲಾನುಭವಿಗಳಿಗೆ ತೊಂದರೆಯಾಗಿರುವ ಬಗ್ಗೆ ತಿಳಿದಿದೆ. ರಾಜ್ಯದಲ್ಲಿ ಒಟ್ಟು 10,500 ಮಂದಿಯ ಹೆಸರು ಗ್ರೀನ್ ಲಿಸ್ಟ್‌ನಲ್ಲಿದ್ದು ಹಣ ಬಿಡುಗಡೆಗೆ ಬಾಕಿ ಇದೆ. ಪುತ್ತೂರಿನ ಸಮಸ್ಯೆ ಹಾಗೂ ನಿಮ್ಮ ಬೇಡಿಕೆ ಬಗ್ಗೆ ಶಾಸಕ ಸಂಜೀವ ಮಠಂದೂರು ಈ ಮೊದಲೇ ನನ್ನ ಗಮನಕ್ಕೆ ತಂದಿದ್ದರು. ಮುಂದಿನ ದಿನಗಳಲ್ಲಿ ಸಾಲ ಮನ್ನಾ ಹಣ ಬಿಡುಗಡೆಯಾಗಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್‌ರವರು ನಿಯೋಗಕ್ಕೆ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!