ಕರಾವಳಿ

Uncategorizedಕರಾವಳಿಜಿಲ್ಲೆ

ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ ಪುನರಾಯ್ಕೆ

ಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಇದರ ಮಹಾಸಭೆ ಮುರ ಎಂಪಿಎಂ ಸಭಾಂಗಣದಲ್ಲಿ ನಡೆಯಿತು. ಯುವಜನ ಪರಿಷತ್ ರಾಜ್ಯ ಸಂಚಾಲಕರಾದ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬಾವು ಪಡೀಲ್, ಉಪಾಧ್ಯಕ್ಷರುಗಳಾಗಿ ಇಬ್ರಾಹಿಂ ಸಾಗರ್, ಮೂಸಾ ಮಾಣಿ ಹಾಗೂ ಶರೀಫ್ ಸಾಲ್ಮರ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಬಶೀರ್ ಪರ್ಲಡ್ಕ, ನೌಶಾದ್ ಬೊಳ್ವಾರು ಹಾಗೂ ಶರೀಫ್ ಮುಕ್ರಂಪಾಡಿ, ಕೋಶಾಧಿಕಾರಿಯಾಗಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಯಾಗಿ ಜುನೈದ್ ಸಾಲ್ಮರ, ಸೂಫಿ ಬಪ್ಪಳಿಗೆ, ರಫೀಕ್ ಬಾಂಬೆ, ಹಸೈನಾರ್ ಬನಾರಿ, ಯೂಸುಫ್ ತಾರಿಗುಡ್ಡೆ, ಹಮೀದ್ ಸೋಂಪಾಡಿ, ಇಬ್ರಾಹಿಂ ಪುತ್ತುಸೇಟ್, ಪತ್ರಿಕಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮುಲಾರ್‌ರವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಖಾಸಿಂ ಹಾಜಿ ಮಿತ್ತೂರು, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಆಯ್ಕೆಯಾದರು. ಕಾನೂನು ಸಲಹೆಗಾರರಾಗಿ ಕೆ.ಎಂ ಸಿದ್ದೀಕ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಬಪ್ಪಳಿಗೆ, ರಶೀದ್ ಮುರ, ಹಮೀದ್ ಮೌಲ ಕಬಕ, ಆದಂ ಕೆದುವಡ್ಕ, ಅಲ್ತಾಫ್ ಬೆಟ್ಟಂಪಾಡಿ, ಇಸ್ಮಾಯಿಲ್ ಸಾಲ್ಮರ, ಅಬ್ದುಲ್ ಹಮೀದ್ ಸಾಲ್ಮರ, ಸಿದ್ದೀಕ್ ಕಲ್ಲೇಗ, ಉನೈಸ್ ಕಬಕ, ಬಾತಿಷ ವಳತ್ತಡ್ಕ ಹಾಗೂ ಶರೀಫ್ ಮುಕ್ರಂಪಾಡಿ ಆಯ್ಕೆಯಾಗಿದ್ದಾರೆ.

Read More
ಕರಾವಳಿಜಿಲ್ಲೆ

ಬಾತಿಷಾ ಸುಲ್ತಾನ್ ಸ್ಮರಣಾರ್ಥ ತಿಂಗಳಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ವಿಖಾಯ ಕುಂಬ್ರ ವಲಯದ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಮರ್‌ಹೂಂ ಬಾತಿಷಾ ಸುಲ್ತಾನ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಸೆ.೧೮ರಂದು ತಿಂಗಳಾಡಿ

Read More
ಕರಾವಳಿಜಿಲ್ಲೆ

ಸಾಮಾಜಿಕ ಕಾರ್ಯಕರ್ತ ಶಬೀರ್ ಕಟ್ಟತ್ತಾರು ಹೃದಯಾಘಾತದಿಂದ ನಿಧನ

ಪುತ್ತೂರು: ಮಾಡಾವು ಸಮೀಪದ ಕಟ್ಟತ್ತಾರು ನಿವಾಸಿ ಶಬೀರ್(25.ವ) ಅವರು ಹೃದಯಘಾತದಿಂದ ಸೆ.17ರಂದು ನಿಧನರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಶಬೀರ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಮಧ್ಯೆಯೇ ಮೃತಪಟ್ಟಿರುವುದಾಗಿ

Read More
ಕರಾವಳಿಜಿಲ್ಲೆ

ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಸ್.ಬಿ ದಾರಿಮಿ

ಪುತ್ತೂರು: ಸರಕಾರದ ಅನ್ಯಾಯ ಮಿತಿ ಮೀರುತ್ತಿದ್ದು ನ್ಯಾಯ ಕೇಳಿದವರಿಗೆ ನ್ಯಾಯ ನಿರಾಕರಣೆಯಾಗುತ್ತಿದೆ. ಸರಕಾರ ಹಿಂದೂ ಧರ್ಮದ ತತ್ವಕ್ಕೆ ಮೋಸ ಮಾಡುವ ಕಾರ್ಯ ಮಾಡುತ್ತಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಹಿಂದೂಗಳೇ ಸರಕಾರದ ವಿರುದ್ಧ ಮುಗಿ ಬೀಳಲಿದ್ದಾರೆ ಎಂದು ಮುಸ್ಲಿಂ ಧಾರ್ಮಿಕ ವಿಧ್ವಾಂಸ ಎಸ್.ಬಿ ಮಹಮ್ಮದ್ ದಾರಿಮಿ ಹೇಳಿದರು. ಮಂಗಳೂರಿನಲ್ಲಿ ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಸೆ.16ರಂದು ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ನಿಮಗೆ ಅಧಿಕಾರ ಇದೆ ಎಂದು ಅನ್ಯಾಯವನ್ನೇ ಮಾಡುತ್ತಿದ್ದೀರಿ. ಇದು ನಿಮಗೆ ತಿರುಗುಬಾಣವಾಗಲಿದ್ದು ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ನಿಮ್ಮ ವಿರುದ್ಧ ಬೀದಿಗಿಳಿಯಲಿದ್ದಾರೆ ಎಂದು ಹೇಳಿದರು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದಾಗ ಸಂಸದರ ಕಾರು ಅಲ್ಲಾಡಿದ್ದನ್ನು ನಾವು ನೋಡಿದ್ದೇವೆ. ನಿಮ್ಮ ಧೋರಣೆ ಬದಲಾಯಿಸದೇ ಇದ್ದಲ್ಲಿ ನಿಮಗೆ ಮುಂದಕ್ಕೂ ಇದೇ ಪರಿಸ್ಥಿತಿ  ಬರಲಿದೆ ಎಂದವರು ಹೇಳಿದರು.

Read More
ಕರಾವಳಿಕ್ರೈಂಜಿಲ್ಲೆ

ಪುತ್ತೂರು ಫೂಟ್’ವೇರ್ ಅಂಗಡಿಯಿಂದ ಲಕ್ಷಾಂತರ ರೂ ಹಣ ಕಳ್ಳತನ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ಸೆ.16ರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕಾಶ್ ಫೂಟ್‌ವೇರ್

Read More
Uncategorizedಕರಾವಳಿಕ್ರೈಂಜಿಲ್ಲೆ

ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ
ಹಿಂದೂಪರ ಸಂಘಟನೆಗಳಿಂದ ತಿಂಗಳಾಡಿಯಲ್ಲಿ ಜಾಥಾ, ರಸ್ತೆ ತಡೆ, ಪ್ರತಿಭಟನೆ

ಪುತ್ತೂರು: ಹಿಂದೂ ಸಮಾಜದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು ಮುಂದಕ್ಕೆ ಇದೇ ರೀತಿ ಮುಂದುವರಿದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ, ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಬಜರಂಗದಳದ

Read More
ಕರಾವಳಿಜಿಲ್ಲೆ

ಸೆ.17: ಪುತ್ತೂರು ಮುರದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸೆಪ್ಟೆಂಬರ್ ತಿಂಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕಬಕ ಗ್ರಾ.ಪಂ ವ್ಯಾಪ್ತಿಯ ಮುರ ಗೌಡ ಸಮುದಾಯ ಭವನದಲ್ಲಿ ಸೆ.17ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More
error: Content is protected !!