ಈಶ್ವರಮಂಗಲ: ‘ಇಲಲ್ ಮದೀನಾ ಸ್ಕ್ವಯರ್’ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಉಮರ್ ಜಿಫ್ರಿ ತಂಗಳ್ ಆಯ್ಕೆ
ಪುತ್ತೂರು: ತ್ವೈಬ ಎಜುಕೇಶನ್ ಸೆಂಟರ್‌ನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಇಲಲ್ ಮದೀನ ಸ್ಕ್ವಯರ್ ಮೀಲಾದ್ ಕಾರ್ಯಕ್ರಮ ಈ ವರ್ಷವೂ ನಡೆಸುವುದಕ್ಕಾಗಿ ಸ್ವಾಗತ ಸಮಿತಿ ರಚಿಸಲಾಯಿತು. ಮೀಲಾದ್ ಘೋಷಣಾ ಜಾಥ, ಮೌಲೀದ್ ಮಜ್ಲಿಸ್‌ಗಳು, ಪ್ರಕೀರ್ತನೆ, ಬುರ್ದಾ ಮಜ್ಲಿಸ್, ಕಲಾಸಾಹಿತ್ಯ ಕಾರ್ಯಕ್ರಮ, ಪ್ರಭಾತ ಮೌಲಿದ್ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
ಸ್ವಾಗತ ಸಮಿತಿಯ ಚೇರ್‌ಮೆನ್ ಆಗಿ ಉಮರ್ ಜಿಫ್ರಿ ತಂಙಳ್ ತ್ವೈಬ, ಕನ್ವೀನರ್ ಆಗಿ ಹಾಫಿಝ್ ಕಬೀರ್ ಹಿಮಮಿ, ಕೋಶಾಧಿಕಾರಿಯಾಗಿ ಅಬ್ಬಾಸ್ ರೋಯಲ್ ಆಯ್ಕೆಯಾಗಿದ್ದಾರೆ.
ವೈಸ್ ಚೇರ್‌ಮೆನ್ ಆಗಿ ಅಬೂಬಕರ್ ಮುಸ್ಲಿಯಾರ್, ಅಶ್ರಫ್ ಸಅದಿ, ಮನ್ಸೂರ್ ಹಾಜಿ ಕೊಟ್ಯಾಡಿ, ಅಬ್ದುಲ್ ಖಾದರ್ ಕುಕ್ಕಾಜೆ, ಅಬ್ದುಲ್ಲ ಹಾಜಿ ಕೆಎಚ್, ಅಬ್ದುಲ್ ಹಮೀದ್ ಮುಂಡೋಳೆ, ಜೊತೆ ಕನ್ವೀನರ್ ಆಗಿ ಹಬೀಬ್ ಕೆ.ಪಿ, ಸಿಯಾನ್, ಹಮೀದ್ ಕೊಯಿಲ, ಶಾಫಿ ಕೊಟ್ಯಾಡಿ, ತ್ವಾಹ ಸಅದಿರವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಹಾಫಿಝ್ ದಾವೂದ್ ಹಿಮಮಿ ಸಖಾಫಿ, ಹಾಫಿಝ್ ಸ್ವಾದಿಖ್ ಹಿಮಮಿ ಸಖಾಫಿ, ಅಬ್ದುಲ್ ಖಾದರ್ ಹಾಜಿ ಪಿ.ಎಂ, ಲತೀಫ್ ಮುಸ್ಲಿಯಾರ್, ಮೊಯಿದು ಮುಸ್ಲಿಯಾರ್, ಆದಂ ಮುಸ್ಲಿಯಾರ್. ಆದಂ ಕೆ.ಪಿ, ಬಶೀರ್ ಕೊಟ್ಯಾಡಿ, ಅಬ್ದುರ್ರಹ್ಮಾನ್ ಝುಹ್ರಿ ಕುಕ್ಕಾಜೆ, ಶರೀಫ್ ಪಿಎಚ್, ಇಬ್ರಾಹಿಮ್ ಅರಫ, ಜಲೀಲ್ ಸಖಾಫಿ ಕರ್ನೂರ್, ಸಲೀಂ ಝುಹ್ರಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಶಿಹಾಬ್ ಸಖಾಫಿ ಮೊದಲಾದವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಅಝೀಝ್ ಮಿಸ್ಬಾಹಿ ಸಭಾಧ್ಯಕ್ಷತೆ ವಹಿಸಿದ್ದರು.
ಹಾಫಿಝ್ ದಾವೂದುಲ್ ಹಕೀಂ ಹಿಮಮಿ ಸಖಾಫಿ ಉದ್ಘಾಟಿಸಿದರು. ಹಾಫಿಝ್ ಕಬೀರ್ ಹಿಮಮಿ ವಿಷಯ ಮಂಡನೆ ಮಾಡಿದರು. ಅಬೂಬಕರ್ ಮುಸ್ಲಿಯಾರ್ ದುವಾ ನೆರವೇರಿಸಿದರು. ತ್ವಾಹ ಸಅದಿ ಸ್ವಾಗತಿಸಿದರು. ಅಬ್ಬಾಸ್ ರೋಯಲ್ ವಂದಿಸಿದರು.