ಕರಾವಳಿಜಿಲ್ಲೆ

ಮಾಡನ್ನೂರು ನೂರುಲ್ ಹುದಾದಲ್ಲಿ
‘ಲೀಡರ‍್ಸ್ ಸಮ್ಮಿಟ್’

ಪುತ್ತೂರು: ಪರಿಶುದ್ಧ ಇಸ್ಲಾಂ ಧರ್ಮವು ಎಂದಿಗೂ ಅಸಹಿಷ್ಣತೆಯನ್ನು ಸಹಿಸದ ಧರ್ಮವಾಗಿದೆ ಎಂದು ಪಾಣಕ್ಕಾಡ್ ಅಸ್ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಹೇಳಿದರು.

ಮಾಡನ್ನೂರು ನೂರುಲ್ ಹುದಾ ಪ್ರಚಾರ ಅಭಿಯಾನದ ಅಂಗವಾಗಿ ಅಕಾಡೆಮಿಯ ಕ್ಯಾಂಪಸ್‌ನಲ್ಲಿ ನಡೆದ ಲೀಡರ‍್ಸ್ ಸಮ್ಮಿಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ನೂರುಲ್ ಹುದಾ ವಿದ್ಯಾಸಂಸ್ಥೆ ಬರೀ ಏಳು ವರ್ಷಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಮುಂದಕ್ಕೆ ಈ ಸಂಸ್ಥೆಯನ್ನು ಇನ್ನಷ್ಟು ಶಕ್ತಿಯುತವಾಗಿ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕೆಂದು ಅವರು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ಕರುನಾಡ ಮಣ್ಣಿನಲ್ಲಿ ಸಮನ್ವಯ ಶಿಕ್ಷಣಕ್ಕೆ ತನ್ನದೇ ಆದ ಗುರಿಯೊಂದಿಗೆ ಹೆಜ್ಜೆಯನ್ನಿಟ್ಟಿರುವ ನೂರುಲ್ ಹುದಾ ವಿದ್ಯಾಸಂಸ್ಥೆಯು ಸಹೃದಯಿಗಳ ಸಹಕಾರದ ಫಲವಾಗಿ ಕೇವಲ ಏಳು ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಸ್ತ ವಿದ್ಯಾಭ್ಯಾಸ ಮಂಡಳಿ ಕಾಸರಗೋಡು ಜಿಲ್ಲಾ ಪ್ರ.ಕಾರ್ಯದರ್ಶಿ ಸೈಯ್ಯದ್ ಹುಸೈನ್ ತಂಙಳ್ ಮಾಸ್ತಿಕುಂಡು ಪ್ರಾರ್ಥಿಸಿದರು. ಸೈಯ್ಯದ್ ಬುರ್ಹಾನ್ ಅಲೀ ತಂಙಳ್, ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಸಂಸ್ಥೆಯ ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ, ಮಂಗಳ ಅಬೂಬಕ್ಕರ್ ಹಾಜಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ನಿವೃತ್ತ ಎಎಸ್ಸೈ ಎಂ.ಡಿ ಹಸೈನಾರ್,  ರಶೀದ್ ಹಾಜಿ ಪರ್ಲಡ್ಕ. ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಎನ್.ಎಸ್ ಅಬ್ದುಲ್ ಹಾಜಿ ಈಶ್ವರಮಂಗಳ, ಆದಂ ಹಾಜಿ ಕಮ್ಮಾಡಿ, ಹಕೀಂ ಪರ್ತಿಪ್ಪಾಡಿ, ಹಮೀದ್ ಮುಸ್ಲಿಯಾರ್ ಮಡಿಕೇರಿ, ಹಂಝ ಹಾಜಿ ಕುಶಾಲನಗರ, ಮೂಸಾ ಕುದ್ಕುಪದವು, ಬಾತಿಷಾ ಹಾಜಿ ಪಾಟ್ರಕೋಡಿ ಅಶ್ರಫ್ ಹಾಜಿ ಪಳ್ಳತ್ತೂರು, ತಾಜ್ ಮಹಮ್ಮದ್, ಸಿ.ಎಚ್, ಅಬ್ದುಲ್ ಅಝೀಝ್ ಹಾಜಿ, ಇಬ್ರಾಹಿಂ ಹಾಜಿ ಮಂಡೆಕೋಲು, ಹಸೈನ್ ಹಾಜಿ ಸಿಟಿ ಬಜಾರ್, ಕೆ.ಕೆ ಇಬ್ರಾಹಿಂ ಹಾಜಿ, ಹಮೀದ್ ಹಾಜಿ ಸುಳ್ಯ, ಅಬ್ದುಲ್ ರಝಾಕ್ ಆತೂರು, ಹಾಶಿಂ ದಾರಿಮಿ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಮುಹಮ್ಮದ್ ಒಮೇಗಾ, ಫಕ್ರುದ್ದೀನ್ ಹಾಜಿ ಕೊಯ್ಲ, ಸಲಾಂ ಪದಡ್ಕ, ಇಸಾಕ್ ಪಡೀಲ್, ಉಮರ್ ಸುಳ್ಯ, ಬಶೀರ್ ಸಿದ್ದಾಪುರ ಮುಂತಾದ ಹಲವಾರು ಗಣ್ಯರು ಭಾಗವಹಿಸಿದ್ದರು. ಸಂಸ್ಥೆಯ ಮ್ಯಾನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೊಲ್ಪೆ ಸ್ವಾಗತಿಸಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.

ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯು ಕ್ಷಿಪ್ರ ಅವಧಿಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಸಂಸ್ಥೆಗೆ ಈಗಾಗಲೇ ಅದೆಷ್ಟೋ ಮಂದಿ ಪ್ರತಿಫಲಾಪೇಕ್ಷೆಯಿಲ್ಲದೇ ಸಹಕಾರ ನೀಡುತ್ತಿದ್ದು ಸಂಸ್ಥೆಯ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ವಿದ್ಯಾಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ವಿದ್ಯಾಸಂಸ್ಥೆಯನ್ನು ಭವಿಷ್ಯದಲ್ಲಿ ಇನ್ನಷ್ಟು ಸಧೃಢವಾಗಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ.

-ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಮ್ಯಾನೇಜರ್ 

Leave a Reply

Your email address will not be published. Required fields are marked *

error: Content is protected !!