ಪುತ್ತೂರು: ಪೆರಿಗೆರಿಯಲ್ಲಿ ಅಂಗಡಿಯ ಎದುರು ವ್ಯಕ್ತಿ ಆತ್ಮಹತ್ಯೆ
ಪುತ್ತೂರು: ವ್ಯಕ್ತಿಯೋರ್ವರು ಅಂಗಡಿಯೊಂದರ ಹೊರಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 11ರಂದು ಬಡಗನ್ನೂರು ಗ್ರಾಮದ ಪೆರಿಗೇರಿಯಲ್ಲಿ ನಡೆದಿದೆ.
ಪೆರಿಗೇರಿಯ ಜಾನು ನಾಯ್ಕ (45. ವ) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಅವರು ಮನೆಯ ಸಮೀಪದ ಅಂಗಡಿಯ ಎದುರು ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.