ಡಾಕ್ಟರ್ ಕೃಷ್ಣಮೂರ್ತಿ ಅನುಮಾನಾಸ್ಪದ ಸಾವಿನ ಪ್ರಕರಣ: ಸಮಗ್ರ ತನಿಖೆಗೆ ಮುಸ್ಲಿಂ ಯೂತ್ ಕೌನ್ಸಿಲ್ ಒತ್ತಾಯ
ಪುತ್ತೂರು: ಪುತ್ತೂರು ಮೂಲದ ವೈದ್ಯರಾದ, ಡಾ. ಕೃಷ್ಣಮೂರ್ತಿಯವರ ಅನುಮಾನಾಸ್ಪದ ಸಾವಿನ ಸಮಗ್ರ ತನಿಖೆಯನ್ನು ನಡೆಸುವಂತೆ, ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಆಗ್ರಹಿಸಿದೆ.
ಪುತ್ತೂರಿನಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವ, ಜನಪ್ರಿಯ ವೈದ್ಯರಿಬ್ಬರ ಸಹೋದರರಾದ ಡಾಕ್ಟರ್ ಕೃಷ್ಣಮೂರ್ತಿಯವರು, ಕರ್ನಾಟಕ- ಕೇರಳ ಗಡಿನಾಡು ಪ್ರದೇಶವಾದ ಬದಿಯಡ್ಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರ ಮೃತ ದೇಹವು ಕುಂದಾಪುರ ಬಳಿ ರೈಲ್ವೆ ಹಳಿ ಪಕ್ಕದಲ್ಲಿ, ಅನುಮಾನಾಸ್ಪದ ವಾಗಿ ಪತ್ತೆಯಾಗಿದೆ. ಇವರ ಸಾವಿನ ಕುರಿತು ಹಲವಾರು ಸಂಶಯಗಳನ್ನು ಅವರ ಕುಟುಂಬಸ್ಥರು ಹೊರ ಹಾಕುತ್ತಿದ್ದಾರೆ. ಈ ಪ್ರಕರಣವು ಕರ್ನಾಟಕ -ಕೇರಳ ಪ್ರದೇಶಕ್ಕೆ ಒಳಪಟ್ಟ ಪ್ರಕರಣವಾದುದರಿಂದ, ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿ, ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಬೇಕೆಂದು, ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಸರಕಾರವನ್ನು ಆಗ್ರಹಿಸಿದ್ದಾರೆ