ರಾಷ್ಟ್ರೀಯ

ಕ್ರಿಕೆಟ್ ಆಡುತ್ತಿದ್ದ ವೇಳೆ ಚೆಂಡು ತಲೆಗೆ ಬಡಿದು ವ್ಯಕ್ತಿ ದಾರುಣ ಸಾವು



ಸಾಂದರ್ಭಿಕ ಚಿತ್ರ

ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುತ್ತಿದ್ದಾಗ ಮೃತಪಟ್ಟ ದಾರುಣ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು 52 ವರ್ಷದ ಉದ್ಯಮಿ ಜಯೇಶ್ ಸಾವ್ಲಾ ಎಂದು ಗುರುತಿಸಲಾಗಿದೆ.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸಾವ್ಲಾ ಅವರ ತಲೆಗೆ ಚೆಂಡು ಬಡಿದಿದ್ದು ತೀವ್ರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜಯೇಶ್ ಸಾವ್ಲಾ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಬ್ಯಾಟ್ಸ್‌ಮನ್ ಹೊಡೆದ ಚೆಂಡು ಅವರ ತಲೆಗೆ ಬಂದು ಬಿದ್ದಿದೆ. ಇದರಿಂದ ಕುಸಿದು ಬಿದ್ದ ಸಾವ್ಲಾ ಪ್ರಜ್ಞೆ ಕಳೆದುಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!