ಕರಾವಳಿಕ್ರೈಂ

ಪುತ್ತೂರು: ಆಟೋ ರಿಕ್ಷಾದಲ್ಲಿ ಕರು ಸಾಗಾಟ: ಮೂವರ ವಿರುದ್ಧ ಪ್ರಕರಣ ದಾಖಲು



ಪುತ್ತೂರು: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.16ರಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿ ಮುಂಡೂರು ಕಡೆಯಿಂದ ಬನ್ನೂರು ಕಡೆಗೆ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ, ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಠಾಣೆಯ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಆಟೋ ರಿಕ್ಷಾವನ್ನು ಬೈಪಾಸ್ ರಸ್ತೆಯ ಸರ್ವಿಸ್ ಸ್ಟೇಷನ್ ಬಳಿ ತಡೆದು ಪರಿಶೀಲಿಸಿದ್ದು, ಆ ವೇಳೆ ಒಂದು ಜಾನುವಾರನ್ನು ಹಿಂಸಾತ್ಮಕವಾಗಿ ಮಲಗಿಸಿ ಕಟ್ಟಿರುವುದು ಕಂಡು ಬಂದಿರುತ್ತದೆ.

ಆಟೋ ಚಾಲಕ ಇಬ್ರಾಹಿಂ ಜಾನುವಾರು ಸಾಗಾಟ ಮಾಡಿದ ಬಗ್ಗೆ ವಿಚಾರಿಸಿದಾಗ ಮುಂಡೂರಿನಿಂದ ಬನ್ನೂರಿಗೆ ಆಟೋ ರಿಕ್ಷಾದಲ್ಲಿ ಕರುವನ್ನು ತುಂಬಿಸಿಕೊಂಡು ಹೋಗುತ್ತಿದ್ದು, ಸಾಗಾಟ ಮಾಡಲು ಸಹಾಯಕ್ಕಾಗಿ ಹೆಂಡತಿ ಮತ್ತು ಸಹೋದರನ ಹೆಂಡತಿಯನ್ನು ಕರೆತಂದಿರುವುದಾಗಿ ತಿಳಿಸಿದ್ದು, ಕರುವನ್ನು ಯಾವುದೇ ಪರವಾನಿಗೆ ಪಡೆಯದೇ ಹಿಂಸಾತ್ಮಕ ರೀತಿಯಲ್ಲಿ ವಧೆಮಾಡಿ ಮಾಂಸ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅ.ಕ್ರ. 92/2024 ಕಲಂ: 4, 5, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ: 11(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960 ಮತ್ತು ಕಲಂ: 66 ಜೊತೆಗೆ 192(A) IMV ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!