ದಾರಿಮೀಸ್ ವಾರ್ಷಿಕೋತ್ಸವದ ಪ್ರಚಾರ ಸಭೆ, ಪೋಸ್ಟರ್ ಬಿಡುಗಡೆ
ವಿಟ್ಲ: ದಾರಿಮೀಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲೆ ಇದರ 23 ನೇ ವಾರ್ಷಿಕೋತ್ಸವ ಹಾಗೂ ಶೈಖುನಾ ಶಂಸುಲ್ ಉಲಮಾ ಆಂಡ್ ನೇರ್ಚೆಯ ಪ್ರಚಾರ ಸಭೆ ಸಾಲೆತ್ತೂರು ಸೌಹಾರ್ದ ಭವನದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಾಹಿನ್ ದಾರಿಮಿ ಪಾತೂರು ವಹಿಸಿದ್ದರು.
ದ.ಕ.ದಾರಿಮೀಸ್ ಅಸೋಸಿಯೇಷನ್ ನ 23 ನೆಯ ವಾರ್ಷಿಕೋತ್ಸವ ಮತ್ತು ಶೈಖುನಾ ಶಂಸುಲ್ ಉಲಮಾ ‘ಆಂಡ್ ನೇರ್ಚೆ’ ಮತ್ತು ಅಧ್ಯಯನ ಶಿಬಿರವು ವಿಟ್ಲದ ಕೆಲಿಂಜ ಜುಮಾ ಮಸೀದಿ ವಠಾರದಲ್ಲಿ ಅಕ್ಟೋಬರ್ 29ಕ್ಕೆ ನಡೆಯಲಿದ್ದು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕರೆ ನೀಡಿದರು. ಖಾಝಿ ಶೈಖುನಾ ಅಹ್ಮದ್ ಮುಸ್ಲಿಯಾರ್ ಪಾತೂರು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ದುವಾ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಹನೀಫ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್, ಸ್ವಾಗತ ಸಮಿತಿ ಕನ್ವಿನರ್ ಮುಹಮ್ಮದಲಿ ದಾರಿಮಿ ಕುಕ್ಕಾಜೆ ಶುಭ ಹಾರೈಸಿದರು. ಸಾಲೆತ್ತೂರು ರೇಂಜ್ ಅಧ್ಯಕ್ಷ ರಜಬ್ ಫೈಝಿ, ಕಾರ್ಯದರ್ಶಿ ಸಿ.ಯಚ್ ಇಬ್ರಾಹಿಂ ಮುಸ್ಲಿಯಾರ್, ಕಲಂದರ್ ಪರ್ತಿಪ್ಪಾಡಿ ಎ.ಬಿ.ಮುಹಮ್ಮದ್ ಹಾಜಿ, ಅಬ್ದುಲ್ ಕಾದರ್ ಮಾಸ್ಟರ್ ಬಂಟ್ವಾಳ, ಅಝೀಜ್ ಕೊಳ್ನಾಡು, ಇರ್ಷಾದ್ ದಾರಿಮಿ ಬಾಂಬಿಲ, ಅಬ್ದುಸ್ಸಮದ್ ಫೈಝಿ ಸಾಲೆತ್ತೂರು, ಉಸ್ಮಾನ್ ಹಾಜಿ ಫಝಲ್ ಹುಡ್ ತಲಕ್ಕಿ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್, ಗ್ರಾಮ ಪಂಚಾಯತ್ ಸದಸ್ಯ ಎ.ಬಿ.ಅಬ್ದುಲ್ಲ , ನಾಟೆಕಲ್ ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಪಿ.ಟಿ.ಇಬ್ರಾಹಿಂ, ಕೊಡಂಗಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಕುಂಞ, ಮೊಯಿದೀನ್ ಕುಕ್ಕಾಜೆ, ಮುಹಮ್ಮದ್ ಮಾಮು ಟಿಪ್ಪುನಗರ ಮೊದಲಾದವರು ಉಪಸ್ಥಿತರಿದ್ದರು.