ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವಾರ್ ಹತ್ಯೆ: ಇಸ್ರೇಲ್ ಘೋಷಣೆ
ಜೆರುಸಲೆಂ: ಭಾರೀ ಕಾರ್ಯಾಚರಣೆಯೊಂದರಲ್ಲಿ ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವಾರ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಐಡಿಎಫ್(ಇಸ್ರೇಲ್ ಮಿಲಿಟರಿ) ಘೋಷಣೆ ಮಾಡಿದೆ.
“ಒಂದು ವರ್ಷದ ಅನ್ವೇಷಣೆಯ ನಂತರ ಯಾಹ್ಯಾ ಸಿನ್ವಾರ್‌ನನ್ನು ದಕ್ಷಿಣ ಗಾಜಾ ಪಟ್ಟಿಯ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ” ಎಂದು ಇಸ್ರೇಲ್ ಮಿಲಿಟರಿ ದೃಢಪಡಿಸಿದೆ. ಆದರೆ, ಅವರ ಸಾವನ್ನು ಹಮಾಸ್ ಇನ್ನೂ ದೃಢಪಡಿಸಿಲ್ಲ.