ವಿಧಾನ ಪರಿಷತ್ ಉಪಚುನಾವಣೆ SDPI ಅಭ್ಯರ್ಥಿಯಿಂದ ಕುಂಬ್ರದಲ್ಲಿ ಮತಯಾಚನೆ

ಪುತ್ತೂರು: ವಿಧಾನ ಪರಿಷತ್ ಉಪಚುನಾವಣೆಯ ಹಿನ್ನಲೆ SDPI ಅಭ್ಯರ್ಥಿ SDPI ಅನ್ವರ್ ಸಾಧತ್ ಬಜತ್ತೂರ್ ರವರು ಮತ ಯಾಚನೆಗಾಗಿ ಇಂದು ಕುಂಬ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಶಾಕಿರ್ ಅಳಕೆಮಜಲ್, ಪುತ್ತೂರು ವಿಧಾನಸಭಾ ಕಾರ್ಯದರ್ಶಿ ಉಸ್ಮಾನ್ ಎ.ಕೆ., ಬಂಟ್ವಾಳ ನಗರ ಸಭಾ ಉಪಾಧ್ಯಕ್ಷರಾದ ಮುನಿಶ್ ಅಲಿ, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಪರ್ಪುಂಜ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ರಶೀದಾ.ಬಿ, SDPI ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ, ಬ್ಲಾಕ್ ಸಮಿತಿ ಸದಸ್ಯರಾದ ಅಶ್ರಫ್ ಪರ್ಪುಂಜ, ರಿಯಾಝ್ ಜಾರತ್ತಾರ್, ಮಸೂದ್ ಸಂಟ್ಯಾರ್, ಎಸ್.ಎಂ ಮಹಮ್ಮದ್ ಕುಂಞ ಉಪಸ್ಥಿತರಿದ್ದರು.