ಸುಳ್ಯ: ಲಾಡ್ಜ್‌ವೊಂದರಲ್ಲಿ ಯುವತಿಯರ ಬಳಸಿಕೊಂಡು ವೇಶ್ಯಾವಾಟಿಕೆ ಆರೋಪ
ಹಿಂದೂ ಸಂಘಟನೆ ಮುಖಂಡರ ದೂರು-ಪೊಲೀಸ್ ದಾಳಿ
ಸುಳ್ಯದಲ್ಲಿ ಕಾರ್ಯಚರಿಸುತ್ತಿರುವ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದಡಿ ಮಾ.15ರಂದು ಸಂಜೆ ಸುಳ್ಯ ಪೊಲೀಸರು ಲಾಡ್ಜಿಗೆ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.
ಈ ಲಾಡ್ಜ್ ನಲ್ಲಿ ಮೊದಲಿನಿಂದಲೇ ವೇಶ್ಯಾವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಸುಳ್ಯ ನಗರ ಕಾರ್ಯಕರ್ತರಿಗೆ ತಿಳಿದಿದ್ದು, ಇದರ ಸತ್ಯಾ ಸತ್ಯತೆಯನ್ನು ತಿಳಿಯಲು ಸಂಘಟನೆಯವರು ನಡೆಸಿದ ಕಾರ್ಯಾಚರಣೆಯಲ್ಲಿ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ತಮ್ಮದೇ ಸಂಘಟನೆಯ ಓರ್ವ ಕಾರ್ಯಕರ್ತನನ್ನು ಲಾಡ್ಜಿಗೆ ಗ್ರಾಹಕರಂತೆ ಕಳುಹಿಸಿ ಬಳಿಕ ಲಾಡ್ಜ್ ನಲ್ಲಿ ಹುಡುಗಿಯರ ಬಗ್ಗೆ ಕೇಳಿದಾಗ ಸ್ಥಳಕ್ಕೆ ಇಬ್ಬರು ಯುವತಿಯರು ಬಂದಿದ್ದು, ಕೂಡಲೆ ಸಂಘಟನೆಯ ಕಾರ್ಯಕರ್ತ ತಮ್ಮ ಸಂಘಟನೆಯ ಮುಖಂಡರಿಗೂ ಮತ್ತು ಸುಳ್ಯ ಪೊಲೀಸರಿಗೂ ಮಾಹಿತಿಯನ್ನು ನೀಡಿದ್ದಾಗಿ
ಈ ಹಿನ್ನಲೆಯಲ್ಲಿ ಸುಳ್ಯ ಪೊಲೀಸರು ಲಾಡ್ಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದ ಇಬ್ಬರು ಯುವತಿಯರನ್ನು ಮತ್ತು ಲಾಡ್ಜ್ ಮಾಲಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.