ಪುತ್ತೂರು: OTP ಹೇಳಿದ ತಕ್ಷಣ ಅಕೌಂಟ್’ನಲ್ಲಿದ್ದ ಲಕ್ಷ ರೂಪಾಯಿ ಮಾಯ
ಪುತ್ತೂರು: ಅಪರಿಚಿತ ವ್ಯಕ್ತಿಗೆ ಒಟಿಪಿ ನಂಬರ್ ಹೇಳಿ ವ್ಯಕ್ತಿಯೋರ್ವರು 1 ಲಕ್ಷ ರೂ. ಕಳೆದುಕೊಂಡ ಘಟನೆ ತಿಂಗಳದಿಯಿಂದ ವರದಿಯಾಗಿದೆ.
ತಿಂಗಳಾಡಿ ಮಜಲುಗದ್ದೆಯ ಕೂಲಿ ಕಾರ್ಮಿಕ ವ್ಯಕ್ತಿಯೋರ್ವರ ಮೊಬೈಲ್ ಗೆ ಸಂದೇಶ ಬಂದಿದ್ದು ಅದರಲ್ಲಿ ನಿಮ್ಮ ಅಕೌಂಟ್ ಕೂಡಲೇ KYC ಮಾಡಬೇಕು ಎಂದು ಬರೆದು ಅದರ ಕೆಳಗೆ ಕೆನರಾ ಬ್ಯಾಂಕ್ ಎಂದು ನಮೂದಿಸಿತ್ತು. ಬಳಿಕ ಕೆಲವೇ ಹೊತ್ತಲ್ಲಿ ಅವರ ಮೊಬೈಲ್ ಗೆ ಕರೆಯೊಂದು ಬಂದಿದೆ, ಕರೆ ಸ್ವೀಕರಿಸಿದ ಕೂಡಲೇ ಆ ಕಡೆಯಿಂದ ಮಾತನಾಡಿದ ವ್ಯಕ್ತಿಯೇ ನಿಮ್ಮ ಅಕೌಂಟ್ ನಂಬರ್ ಇದೇ ಅಲ್ವಾ? ಎಂದು ಕೇಳಿ ಅಡ್ರೆಸ್ ಕೂಡ ಖಚಿತಪಡಿಸಿಕೊಂಡಿದ್ದರು. ನಿಮ್ಮ ಮೊಬೈಲಿಗೆ ಓಟಿಪಿ ಬಂದಿದ್ದು ಅದನ್ನು ಹೇಳಿ ಎಂದು ಆ ಕಡೆಯಿಂದ ಹೇಳಿದ ಕೂಡಲೇ ವ್ಯಕ್ತಿ ಓಟಿಪಿ ನಂಬರ್ ನೀಡಿದರು ಬಳಿಕ ಕ್ಷಣಾರ್ಧದಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಡ್ರಾ ಆಗಿತ್ತು ಎಂದು ತಿಳಿದುಬಂದಿದೆ. ಮೋಸ ಹೋದ ವ್ಯಕ್ತಿ ಸಾಲ ಮಾಡಿದ್ದ ಹಣ ಬ್ಯಾಂಕ್ ಅಕೌಂಟ್ ನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.