ಈಡನ್ ಗ್ಲೋಬಲ್ ಸ್ಕೂಲ್’ನಲ್ಲಿ ಅಲಿಫ್ ಡೇ
ಪುತ್ತೂರು: ಬೆಳಂದೂರಿನ ಈಡನ್ ಗ್ಲೋಬಲ್ ಸ್ಕೂಲ್ ನಲ್ಲಿ 2025-26ನೇ ಶೈಕ್ಷಣಿಕ ವರ್ಷದ ಕಿಂಡರ್ ಗಾರ್ಟನ್ ಹಾಗೂ ಝಹರತುಲ್ ಖುರ್ಆನ್ ವಿಭಾಗದ ಎಲ್ ಕೆ ಜಿ ಹಾಗೂ ಎಲ್ ಝಿಕ್ಯೂ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಅಲಿಫ್ ಡೇ ಆಚರಿಸಲಾಯಿತು.

ಝಿಕ್ಯೂ ವಿಭಾಗದ ವಿದ್ಯಾರ್ಥಿಗಳ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಪಂಡಿತ ಮಹಮೂದುಲ್ ಫೈಝಿ ಓಲೆಮುಂಡೋವು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರಾದ ಪುತ್ತು ಬಾವ ಹಾಜಿ ಅಧ್ಯಕ್ಷೀಯ ಭಾಷಣಗೈದರು. ನಂತರ ಸಂಸ್ಥೆಯ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಶೈಕ್ಷಣಿಕ ಬೆಳವಣಿಗೆ ಹಾಗೂ ಸಂಸ್ಥೆಯ ವೈಶಿಷ್ಟ್ಯಗಳನ್ನು ಪೋಷಕರಿಗೆ ವಿವರಿಸಿದರು.
ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರಾದ ಖಾದರ್ ಹಾಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ನಂತರ ಕಿಂಡರ್ ಗಾರ್ಟನ್ ಹಾಗೂ ಝೀಕ್ಯೂ ಕೋಆರ್ಡಿನೇಟರ್ಗಳಾದ ಶ್ರುತಿ ಶೆಟ್ಟಿ ಹಾಗೂ ಅನಿಶಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಅರೇಬಿಕ್ ಅಕ್ಷರ ಅಲಿಫ್ ಬರೆಸಿ ವಿದ್ಯಾರ್ಥಿಗಳನ್ನು ಹೊಸ ಶೈಕ್ಷಣಿಕ ವರ್ಷಕ್ಕೆ ಮುನ್ನುಡಿ ಬರೆಯಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರಾದ ಅಬ್ಬಾಸ್ ಹಾಜಿ ನೆಕ್ಕರೆ,ಪೋಷಕರಾದ ಮನ್ಸೂರ್, ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರು ಮತ್ತು ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಕುಮಾರಿ ಸಮೀನಾ ಸ್ವಾಗತಿಸಿದರು. ಶಿಕ್ಷಕಿಯರಾದ ಅಫ್ರೀನ್ ಹಾಗೂ ಸುನೈನಾ ಕಾರ್ಯಕ್ರಮ ನಿರೂಪಿಸಿದರು. ಇಸ್ಫಾನ ವಂದಿಸಿದರು.