ಡಾಕ್ಟರ‍್ಸ್ ಡೇ ಪ್ರಯುಕ್ತ ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನಲ್ಲಿ 9 ಮಂದಿ ವೈದ್ಯರಿಗೆ ಸನ್ಮಾನ ಗೌರವಾರ್ಪಣೆ
ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್&ಗೋಲ್ಡ್‌ನಲ್ಲಿ ಜು.1ರಂದು ಡಾಕ್ಟರ‍್ಸ್ ಡೇ ಪ್ರಯುಕ್ತ 9 ಮಂದಿ ವೈದ್ಯರಿಗೆ ಅವರ ಸೇವೆಯನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಡಾ.ಸುರೇಶ್ ಪುತ್ತೂರಾಯ, ಡಾ.ಬದ್ರುದ್ದೀನ್ ಎಂ.ಎನ್, ಡಾ.ಶೃತಿ ಅಲೆವೂರ್, ಡಾ.ಹಬೀನಾ ಶಾಯಿರಾ, ಡಾ.ಇಸ್ಮಾಯಿಲ್ ಸರ್ಫರಾಝ್, ಡಾ.ಸಿಮ್ಲಾ, ಡಾ.ಹಸನ್ ಸಾಲಿ, ಡಾ.ಚೈತ್ರಾ ಟಿ.ಎಸ್ ಹಾಗೂ ಡಾ.ಕೃತಿಕಾ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪುತ್ತೂರು ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ ಸಾರ್ವಜನಿಕರು ವಿವಿಧ ರೋಗಗಳ ಬಗ್ಗೆ ಮಾಹಿತಿ ತಿಳಿದುಕೊಂಡು ರೋಗ ಬಾರದ ಹಾಗೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು, ಆರೋಗ್ಯದ ಬಗ್ಗೆ ಪ್ರತಿಯೋರ್ವರಿಗೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಡಾ.ಬದ್ರುದ್ದೀನ್ ಎಂ.ಎನ್ ಮಾತನಾಡಿ ಇತ್ತೀಚೆಗೆ ಜನರ ಆಹಾರ ಪದ್ದತಿ, ಒತ್ತಡ ಮೊದಲಾದವುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಹೃದಯಾಘಾತದಂತಹ ಘಟನೆಗಳು ನಡೆಯುತ್ತಿದೆ, ಇದರ ಬಗ್ಗೆ ಅರಿವು ಅಗತ್ಯ ಎಂದರು.

ಡಾ.ಹಬೀನಾ ಶಾಯಿರಾ ಮಾತನಾಡಿ ಪ್ರತಿಯೊಬ್ಬರೂ ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ಆರೋಗ್ಯ ಪರೀಕ್ಷೆ ಮಾಡಿಸುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಡಾ.ಹಸನ್ ಸಾಲಿ ಮಾತನಾಡಿ ವೈದ್ಯರು ಕೂಡಾ ಕೆಲವು ಸಂದರ್ಭಗಳಲ್ಲಿ ಒತ್ತಡದ ಸನ್ನಿವೇಶದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇರುತ್ತದೆ, ಹಾಗಂತ ವೈದ್ಯರು ರೋಗಿಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ಯಾವತ್ತೂ ಹೊಂದಿರುವುದಿಲ್ಲ ಎಂದು ಹೇಳಿದರು.
ಸಂಸ್ಥೆಯ ಸಿಬ್ಬಂದಿ ಮೇಘನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಹಮ್ರಾಝ್ ವಂದಿಸಿದರು. ಸೇಲ್ಸ್ ಮ್ಯಾನೇಜರ್ ರಹವತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.