ಪುತ್ತೂರು: ನರಿಮೊಗರು ಶಾಲೆಯ ಅತಿಥಿ ಶಿಕ್ಷಕಿಯಿಂದ ವಿದ್ಯಾರ್ಥಿಗೆ ಕಬ್ಬಿಣದ ಸ್ಕೇಲ್ನಿಂದ ಹಲ್ಲೆ-ಆರೋಪ: ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು
ಪುತ್ತೂರು: ನರಿಮೊಗರು ಶಾಲೆಯ ಅತಿಥಿ ಶಿಕ್ಷಕಿಯೋರ್ವರು ಕಬ್ಬಿಣದ ಸ್ಕೇಲ್ನಿಂದ ಕೈ ಬೆರಳಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯೋರ್ವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನರಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಧ್ಯಾಹ್ನ ಊಟದ ಬಳಿಕ ನೀರು ಕುಡಿಯಲು ಹೋಗಿದ್ದನ್ನು ಪ್ರಶ್ನಿಸಿ ವೀಣಾ ಎಂಬ ಅತಿಥಿ ಶಿಕ್ಷಕಿ ನನಗೆ ಮತ್ತು ಇನ್ನೊಬ್ಬ ವಿದ್ಯಾರ್ಥಿಗೆ ಕಬ್ಬಿಣದ ಸ್ಕೇಲ್ನಿಂದ ಹೊಡೆದಿದ್ದು ಬಲ ಕೈಯ ಬೆರಳ ತುದಿಗೆ ಹೊಡೆದಿರುವುದರಿಂದ ಗಾಯವಾಗಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ. ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಶಿಕ್ಷಕಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ವರದಿಯಾಗಿದೆ.