ರೆಸ್ಟೋರೆಂಟ್ ತೆರೆದ ಟೀಮ್ ಇಂಡಿಯಾ ವೇಗಿ ಸಿರಾಜ್
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಹೊಸ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಅವರು ತಮ್ಮ ಕನಸಿನ ‘ಜೋಹರ್ಫಾ’ ಎಂಬ ಹೆಸರಿನ ರೆಸ್ಟೋರೆಂಟ್ ತೆರೆದಿದ್ದಾರೆ. ಹೈದರಾಬಾದ್‌ನ ಹೃದಯಭಾಗದಲ್ಲಿರುವ ಜೋಹರ್ಫಾ ರೆಸ್ಟೋರೆಂಟ್, ಪ್ರಸಿದ್ಧ ಚೀನೀ ಭಕ್ಷ್ಯಗಳೊಂದಿಗೆ ಮೊಘಲಾಯಿ, ಪರ್ಷಿಯನ್ ಮತ್ತು ಅರೇಬಿಯನ್ ಆಹಾರವನ್ನು ಒದಗಿಸುತ್ತದೆ. ಈ ರೆಸ್ಟೋರೆಂಟ್ ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಸಿರಾಜ್ ಹೇಳಿದ್ದಾರೆ. ಒಂದೆಡೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೆ ಮತ್ತೊಂದೆಡೆ, ಸಿರಾಜ್ ಈಗ ಉದ್ಯಮಿಯಾಗಿದ್ದಾರೆ. ಆ ಮೂಲಕ ತನ್ನ ಸೂಪರ್ ಹೀರೊ ವಿರಾಟ್ ಕೊಹ್ಲಿ ಹಾದಿಯನ್ನೇ ಸಿರಾಜ್ ಅನುಸರಿಸಿದಂತಾಗಿದೆ.

ಹೈದರಾಬಾದ್‌ನ ಹೃದಯಭಾಗದಲ್ಲಿರುವ ಜೋಹರ್ಫಾ ರೆಸ್ಟೋರೆಂಟ್ ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಸಿರಾಜ್ ಹೇಳಿದ್ದಾರೆ. “ಜೋಹರ್ಫಾ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಹೈದರಾಬಾದ್ ನನಗೆ ನನ್ನ ಗುರುತನ್ನು ನೀಡಿದೆ. ಈ ರೆಸ್ಟೋರೆಂಟ್ ಈ ನಗರಕ್ಕೆ ಏನನ್ನಾದರೂ ಮರಳಿ ನೀಡುವ ನನ್ನ ಮಾರ್ಗವಾಗಿದೆ. ಇಲ್ಲಿ ಜನರು ಒಟ್ಟಿಗೆ ಸೇರಬಹುದು, ಆಹಾರವನ್ನು ಸೇವಿಸಬಹುದು ಮತ್ತು ಮನೆಯಲ್ಲಿರುವಂತೆ ಅನುಭವ ಪಡೆಯಬಹುದು” ಎಂದು ಸಿರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.