ಕರಾವಳಿಜಿಲ್ಲೆ

ಬಾತಿಷಾ ಸುಲ್ತಾನ್ ಸ್ಮರಣಾರ್ಥ ತಿಂಗಳಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರಪುತ್ತೂರು: ಎಸ್ಕೆಎಸ್ಸೆಸ್ಸೆಫ್ ವಿಖಾಯ ಕುಂಬ್ರ ವಲಯದ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಮರ್‌ಹೂಂ ಬಾತಿಷಾ ಸುಲ್ತಾನ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಸೆ.೧೮ರಂದು ತಿಂಗಳಾಡಿ ಜಿಸ್ತಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಸಭೆ ಉದ್ಘಾಟಿಸಿದ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಪ್ರ.ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ ಮಾತನಾಡಿ ಎಸ್ಕೆಎಸ್ಸೆಸ್ಸೆಫ್ ಸಂಘಟನೆ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.

ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ಇಬ್ರಾಹಿಂ ಕಡವ, ಪತ್ರಕರ್ತ ಯೂಸುಫ್ ರೆಂಜಲಾಡಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ರಾಮಚಂದ್ರ ಭಟ್ ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಅಧ್ಯಕ್ಷ ಅಬ್ದುಲ್ ಕರೀಂ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎಂ ಇಬ್ರಾಹಿಂ ಕೆಯ್ಯೂರುರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಸಂಘಟನಾ ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್, ಜಿಸ್ತಿಯ ಮದ್ರಸದ ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಸಂತೋಷ್, ಯುವ ಉದ್ಯಮಿ ನೌಫಲ್ ಅಜ್ಜಿಕಲ್ಲು ಉಪಸ್ಥಿತರಿದ್ದರು.
ವಿಖಾಯ ಕುಂಬ್ರ ವಲಯ ಕನ್ವೀನರ್ ಅಶ್ರಫ್ ಸಾರೆಪುಣಿ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ತಿಂಗಳಾಡಿ ಕ್ಲಸ್ಟರ್ ಪ್ರ.ಕಾರ್ಯದರ್ಶಿ ಶಕೀಲ್ ಅಹ್ಮದ್ ಬೇರಿಕೆ ವಂದಿಸಿದರು. ತಿಂಗಳಾಡಿ ಜಿಸ್ತಿಯಾ ಮದ್ರಸದ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!