ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಸ್.ಬಿ ದಾರಿಮಿ

ಪುತ್ತೂರು: ಸರಕಾರದ ಅನ್ಯಾಯ ಮಿತಿ ಮೀರುತ್ತಿದ್ದು ನ್ಯಾಯ ಕೇಳಿದವರಿಗೆ ನ್ಯಾಯ ನಿರಾಕರಣೆಯಾಗುತ್ತಿದೆ. ಸರಕಾರ ಹಿಂದೂ ಧರ್ಮದ ತತ್ವಕ್ಕೆ ಮೋಸ ಮಾಡುವ ಕಾರ್ಯ ಮಾಡುತ್ತಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಹಿಂದೂಗಳೇ ಸರಕಾರದ ವಿರುದ್ಧ ಮುಗಿ ಬೀಳಲಿದ್ದಾರೆ ಎಂದು ಮುಸ್ಲಿಂ ಧಾರ್ಮಿಕ ವಿಧ್ವಾಂಸ ಎಸ್.ಬಿ ಮಹಮ್ಮದ್ ದಾರಿಮಿ ಹೇಳಿದರು.
ಮಂಗಳೂರಿನಲ್ಲಿ ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಸೆ.16ರಂದು ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ನಿಮಗೆ ಅಧಿಕಾರ ಇದೆ ಎಂದು ಅನ್ಯಾಯವನ್ನೇ ಮಾಡುತ್ತಿದ್ದೀರಿ. ಇದು ನಿಮಗೆ ತಿರುಗುಬಾಣವಾಗಲಿದ್ದು ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ನಿಮ್ಮ ವಿರುದ್ಧ ಬೀದಿಗಿಳಿಯಲಿದ್ದಾರೆ ಎಂದು ಹೇಳಿದರು.

ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದಾಗ ಸಂಸದರ ಕಾರು ಅಲ್ಲಾಡಿದ್ದನ್ನು ನಾವು ನೋಡಿದ್ದೇವೆ. ನಿಮ್ಮ ಧೋರಣೆ ಬದಲಾಯಿಸದೇ ಇದ್ದಲ್ಲಿ ನಿಮಗೆ ಮುಂದಕ್ಕೂ ಇದೇ ಪರಿಸ್ಥಿತಿ ಬರಲಿದೆ ಎಂದವರು ಹೇಳಿದರು.