ಕರಾವಳಿ

ಕಂಬಳಬೆಟ್ಟು ಶಾಂತಿನಗರ ಮದ್ರಸದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ- ಆಕರ್ಷಕ ಮೆರವಣಿಗೆ

ವಿಟ್ಲ: ಕಂಬಳಬೆಟ್ಟು ಶಾಂತಿನಗರ ಮದ್ರಸದಲ್ಲಿ ಸಡಗರ ಸಂಭ್ರಮದಿಂದ ಈದ್ ಮಿಲಾದ್ ನಡೆಯಿತು. ಕಾರ್ಯಕ್ರಮ ಶಾಂತಿನಗರ ಇಮಾಂ ಎಂ.ಎ ಮುಹಮ್ಮದ್ ಹಾರೀಸ್ ಮದನಿ ಪಾಟ್ರಕೋಡಿಯವರ ನೇತ್ರತ್ವದಲ್ಲಿ ಮೌಲಿದ್ ಮಜ್ಲಿಸಿನೊಂದಿಗೆ ಪ್ರಾರಂಭಗೊಂಡಿತು.

ಬೆಳಗ್ಗೆ ಕಂಬಳಬೆಟ್ಟು ಮುದರ್ರಿಸ್ ಇಬ್ರಾಹಿಂ ಮದನಿಯವರ ನೇತ್ರತ್ವದಲ್ಲಿ ಶಾಂತಿನಗರ ಮದ್ರಸ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಮೊನುರವರು ದ್ವಜರೋಹಣ ಮಾಡಿದರು.

ಕಾರ್ಯಕ್ರಮದಲ್ಲಿ ಕಂಬಳಬೆಟ್ಟು ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಮೋಹಿದಿನ್ ಶಾಫಿ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದಲ್ ಖಾದರ್ ಬದ್ರಿಯಾ, ಶಾಂತಿನಗರ ಮದ್ರಸದ ಪ್ರಧಾನ ಕಾರ್ಯದರ್ಶಿ ಅಬ್ದಲ್ ಸತ್ತಾರ್, ಕೊಶಾಧಿಕಾರಿ ನೂಜಿ ಅಬ್ದಲ್ ಗಪೂರ್, ಉಪಾಧ್ಯಕ್ಷರಾದ ಅಬ್ದಲ್ ರಹಿಮಾನ್, ಕಾರ್ಯದರ್ಶಿ ಹಮೀದ್ ಕೆಕೆ, ಸದಸ್ಯರಾದ ಹಕೀಂ, ಎಸ್ ಎಂ ಇಲ್ಯಾಸ್, ಅಶ್ರಫ್ ಕೆಕೆ, ಅಶ್ರಫ್ ಕೊಪ್ಪಳ, ಅಬ್ದುಲ್ ರಝಾಕ್ ಕೆಕೆ, ರಫೀಕ್ ಎಂಕೆ, ರಫೀಕ್ ಜವುಲಿ ಶಾಂತಿನಗರ, ಅಧ್ಯಾಪಕರಾದ ಶರೀಫ್ ಮದನಿ ಪಾನೆಲ, ಬದ್ರುದ್ದೀನ್ ಮದನಿ ಕದಿಕೆ, ಅಬ್ದುಲ್ ಖಾದರ್ ಜೀಲಾನಿ, ಸಾದಾತ್ ನಗರ ಅಧ್ಯಾಪಕರಾದ ಹನೀಫ್ ಸಖಾಫಿ, ಝಕರಿಯ ಸಖಾಫಿ, ಹನೀಫ್ ಮುಸ್ಲಿಯಾರ್, ಹನೀಫ್ ಸಹದಿ ಉಪಸ್ಥಿತರಿದ್ದರು.

ನಂತರ ಶಾಂತಿನಗರದಿಂದ ಬದನಾಜೆಯ ತನಕ ಆಕರ್ಷಣಿಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ರಿಫಾಯಿಯ ದಪ್ಪ್ ತಂಡದ ದಪ್ಪ್ ಪ್ರದರ್ಶನ ಹಾಗೂ ಶಾಂತಿನಗರದಲ ಮದ್ರಸದ ವಿದ್ಯಾರ್ಥಿಗಳ ಸ್ಕೌಟ್ ನೊಡುಗರ ಮನಸೆಳೆಯಿತು.

ಜಾಥದ ಉದ್ದಕ್ಕೂ ಹಲವಾರು ಮಂದಿ ಸಿಹಿ ತಿಂಡಿ ತಂಪು ಪಾನಿಯ ನೀಡಿ ಸಹಕರಿಸಿದರು ನೆಬಿ ಕೀರ್ತನ ಹಾಡಿನ ಮೂಲಕ ಮೆರವಣಿಗೆ ಗಮನ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!