ವ್ಯಕ್ತಿಯೊಬ್ಬರ ಮೇಲೆ ಎಸೆದ ಬಾಟಲಿ ಇನ್ನೊಬ್ಬರ ತಲೆಗೆ..!
ಆರೋಪಿ ಪೊಲೀಸ್ ವಶ
ಪುತ್ತೂರು: ವ್ಯಕ್ತಿಯೊಬ್ಬರಿಗೆ ಎಸೆದ ಬಾಟಲಿ ಇನ್ನೊಬ್ಬರಿಗೆ ತಾಗಿ ಅವರು ಗಾಯಗೊಂಡ ಘಟನೆ ಕಬಕ ಕರ್ನಾಟಕ ಬ್ಯಾಂಕ್‌ನ ಆವರಣದಲ್ಲಿ ಆ.7ರಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಕಬಕ ಪಂಜುರ್ಲಿಪಾದೆ ಉಮೇಶ್ ನಾಯ್ಕ ಎಂಬವರು ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಬಕದ ಸೆಲೂನ್ ವೊಂದರ ಅಕ್ಷಿತ್ ಎಂಬವರು ಬಾಟಲಿ ಎಸೆದವರು ಎಂದು ಗುರುತಿಸಲಾಗಿದೆ. ಕಬಕದ ಬಾರ್ ವೊಂದರ ಸಿಬ್ಬಂದಿ ಲಕ್ಷ್ಮೀಶ್ ಎಂಬವರು ಕರ್ನಾಟಕ ಬ್ಯಾಂಕ್ ಕಬಕ ಶಾಖೆಯಲ್ಲಿ ಹಣ ಪಾವತಿ ಮಾಡಲು ಬಂದಾಗ ಸೆಲೂನ್‌ವೊಂದರ ಅಕ್ಷಿತ್ ಎಂಬವರು ಹಲ್ಲೆ ನಡೆಸಲೆಂದು ಎಸೆದ ಬಾಟಲಿ ತಪ್ಪಿ ಅಲ್ಲಿದ್ದ ಉಮೇಶ್ ನಾಯ್ಕ ಅವರಿಗೆ ತಾಗಿದೆ. ತಲೆಗೆ ತೀವ್ರ ಗಾಯಗೊಂಡ ಉಮೇಶ್ ನಾಯ್ಕ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಾಟಲಿ ಎಸೆದ ಅಕ್ಷಿತ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.