ಈಶ್ವರಮಂಗಲದಲ್ಲಿ ಟ್ವೆಂಟಿ-ಟ್ವೆಂಟಿ ಪವರ್ ಸಿಸ್ಟಮ್ಸ್ ಶುಭಾರಂಭ
ಪುತ್ತೂರು: ಇನ್ವರ್ಟರ್, ಬ್ಯಾಟರಿ, ಸೋಲಾರ್, ಸಿಸಿ ಟಿವಿ ಕ್ಯಾಮರಾ ಹಾಗೂ ಗೃಹೋಪಯೋಗಿ ವಸ್ತುಗಳ ಟ್ವೆಂಟಿ-ಟ್ವೆಂಟಿ ಪವರ್ ಸಿಸ್ಟಮ್ ಈಶ್ವರಮಂಗಲ ಕರ್ನಾಟಕ ಕಾಂಪ್ಲೆಕ್ಸ್‌ನಲ್ಲಿ ಅ.೬ರಂದು ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಶ್ವರಮಂಗಲಕ್ಕೆ ಹೊಸ ಉದ್ಯಮಗಳು ಬರುತ್ತಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿ ಶುಭಾರಂಭಗೊಂಡ ಟ್ವೆಂಟಿ-ಟ್ವೆಂಟಿ ಶೋರೂಂ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಶ್ರೀಶ ಕುಮಾರ್ ಮರಕ್ಕಡ, ಇಬ್ರಾಹಿಂ ಹಾಜಿ, ಸಿದ್ದೀಕ್, ಬಾತಿಷಾ ಈಶ್ವರಮಂಗಲ ಮತ್ತಿತರರು ಉಪಸ್ಥಿತರಿದ್ದರು.

ಟ್ವೆಂಟಿ-ಟ್ವೆಂಟಿ ಸಂಸ್ಥೆಯ ಮಾಲಕ ಮೊಯ್ದೀನ್ ಅವರು ಸ್ವಾಗತಿಸಿ ಮಾತನಾಡಿ ಕಾಸರಗೋಡು ಜಿಲ್ಲೆಯಲ್ಲಿ ಮತ್ತು ಕರ್ನಾಟಕದ ದ.ಕ ಜಿಲ್ಲೆಯಲ್ಲಿ ೧೯೯೭ರಲ್ಲಿ ಪ್ರಾರಂಭಗೊಂಡ ಯುವರ್ ಚಾಯಿಸ್ ನೂತನ ಸಂಸ್ಥೆಯಾದ ಟ್ವೆಂಟಿ ಟ್ವೆಂಟಿ ಪವರ್ ಸಿಸ್ಟಮ್‌ನ ಎರಡನೇ ಶೋರೂಂ ಇಲ್ಲಿ ಶುಭಾರಂಭಗೊಂಡಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.