ಕರಾವಳಿ

ಕರಾವಳಿ

ನಾಳೆ ವಿಟ್ಲದಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್’ನಿಂದ ದಿವ್ಯಪ್ರಭಾ ಗೌಡರಿಗೆ ಸನ್ಮಾನ

ಪುತ್ತೂರು: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಶಾಂತಿನಗರ ವಿಟ್ಲ ಇದರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸಬಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಡಿ.18ರಂದು ವಿಟ್ಲ ಶಾಂತಿನಗರ ಅಕ್ಷಯ ಶ್ರೀಮತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಗಣಪತಿ ಹೋಮ ಮತ್ತು  ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು ನಂತರ  ಸಭಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ಕಾರ್ಯಕ್ರಮದಲ್ಲಿ ಕುಳ, ಇಡ್ಕಿದು, ನೆಟ್ಲಮುಡ್ನೂರು, ಕೆದಿಲ, ಪುಣಚ, ಬಿಳಿಯೂರು, ಪೆರ್ನೆ, ವಿಟ್ಲಮುಡ್ನೂರು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ನಡೆಯಲಿದೆ. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಾ ನಿರಂತರವಾಗಿ ಸಹಕಾರವನ್ನು ನೀಡುತ್ತಾ ಬಂದಿರುವ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Read More
ಕರಾವಳಿರಾಜಕೀಯ

ಸ್ವಪಕ್ಷದ, ನಾಯಕರ ವಿರುದ್ಧ ಬಿಜೆಪಿ ಮುಖಂಡರೋರ್ವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್: ಆಡಿಯೋ ನನ್ನದಲ್ಲ- ಅಬ್ದುಲ್ ಕುಂಞಿ

ಪುತ್ತೂರು: ಬಿಜೆಪಿ ಮುಖಂಡರೋರ್ವರು ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದು ಪುತ್ತೂರು ತಾ.ಪಂ ಕೆಡಿಪಿ ಸದಸ್ಯರು,

Read More
ಕರಾವಳಿಕ್ರೈಂ

ಕಡಬ: ಕೊಯಿಲ ಮನೆಯೊಂದರಿಂದ ರೂ.2 ಲಕ್ಷ ನಗದು ಕಳ್ಳತನ

ಕಡಬ: ತಾಲೂಕಿನ ಕೊಯಿಲ ಗ್ರಾಮದ ಮನೆಯೊಂದರಲ್ಲಿ 2 ಲಕ್ಷ ರೂ.ನಗದು ಕಳವುಗೊಂಡಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮಹಮ್ಮದ್ ರಫೀಕ್

Read More
ಕರಾವಳಿ

ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟ ವಿದ್ಯಾರ್ಥಿಗಳು- ವಿಡಿಯೋ ವೈರಲ್

ಪುತ್ತೂರು: ಬಸ್ಸಿನಲ್ಲಿ ನಿಂತುಕೊಳ್ಳಲೂ ಕೂಡಾ ಜಾಗವಿಲ್ಲದ ಕಾರಣ ವಿದ್ಯಾರ್ಥಿಗಳಿಬ್ಬರು ರಸ್ತೆಗೆಸೆಯಲ್ಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದ್ದು ಇದು ಕೇರಳ ಕರ್ನಾಟಕ ಗಡಿ ಪ್ರದೇಶವಾಗಿರುವ ಕುಂಟಾರು-ಪುತ್ತೂರು ಪ್ರಯಾಣದ ಬಸ್ಸಿನಲ್ಲಿ ಸಂಭವಿಸಿದ್ದು ಎನ್ನಲಾಗುತ್ತಿದೆ.  ಕೆಎಸ್‌ಆರ್‌ಟಿಸಿ ಬಸ್ ಚಲಿಸುತ್ತಿದ್ದಂತೆ ವಿದ್ಯಾರ್ಥಿಗಳು ಬಸ್‌ನಿಂದ ಹೊರಕ್ಕೆಸೆಯಲ್ಪಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿದ್ಯಾರ್ಥಿಗಳಿಗೆ ಗಾಯಗಳಾಗಿದೆ ಎನ್ನಲಾಗಿದೆ. ಇದು ಬೆಳಗ್ಗಿನ ಹೊತ್ತಲ್ಲಿ ನಡೆದಿರುವ ಘಟನೆಯಾಗಿದ್ದು ಯಾವ ದಿನದಂದು ಸಂಭವಿಸಿದ್ದು ಮತ್ತು ಸಂಭವಿಸಿದ ಸ್ಪಷ್ಟ ಸ್ಥಳ ಇನ್ನಷ್ಟೇ ತಿಳಿದು ಬರಬೇಕಿದೆ. ಕುಂಟಾರು-ಪುತ್ತೂರು ಮಧ್ಯೆ ಇದೇ ಪರಿಸ್ಥಿತಿ ಹಲವು ಸಮಯಗಳಿಂದ ಇದ್ದರೂ ಸಂಬಂಧಪಟ್ಟವರು ಇದರ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

Read More
ಕರಾವಳಿ

ಸುಳ್ಯದಲ್ಲೊಂದು ಅಪಾಯಕಾರಿ ತೂಗು ಸೇತುವೆ: ತುಕ್ಕು ಹಿಡಿದು ಸಂಪೂರ್ಣವಾಗಿ ತುಂಡಾದ ಸೇತುವೆಯ ತಡೆ ಬೇಲಿಗಳು

✍️ ಹಸೈನಾರ್ ಜಯನಗರ ‘ಇತ್ತೀಚೆಗೆ ಗುಜರಾತಿನ ಮೊರ್ಬಿಯಲ್ಲಿ ನದಿಯಲ್ಲಿ ಅಳವಡಿಸಿದ್ದ ತೂಗು ಸೇತುವೆ ದುರಂತದಿಂದ 130ಕ್ಕೂ ಹೆಚ್ಚು ಮಂದಿ ಜೀವ ವನ್ನು ಕಳೆದುಕೊಂಡು, ನೂರಕ್ಕೂ ಹೆಚ್ಚು ಮಂದಿ

Read More
ಕರಾವಳಿರಾಜಕೀಯ

ಸುಳ್ಯ: ಕಾಂಗ್ರೆಸ್ ನಲ್ಲಿ ಮುಂದುವರಿದ ಆಂತರಿಕ ಗುದ್ದಾಟ: ಕಾಂಗ್ರೆಸ್ ಮುಖಂಡ ಟಿ.ಎಂ.ಶಹೀದ್ ವಿರುದ್ಧ ಅಸಮಾಧಾನ ತೋಡಿಕೊಂಡ ಸೋಮಶೇಖರ್ ಕೊಯಿಂಗಾಜೆ

ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಪಂಚಾಯತ್ ಅಧ್ಯಕ್ಷರನ್ನು ಬೆಂಬಲಿಸುತ್ತಿರುವ ಟಿ.ಎಂ. ಶಹೀದ್ ಅವರೇ ಕಾರಣ,’ಸಂಪಾಜೆಯಲ್ಲಿ ಪಕ್ಷವನ್ನು ಕಟ್ಟಿ ಆಡಳಿತಕ್ಕೆ ತರಬೇಕೆ ಹೊರತು ಪಕ್ಷವನ್ನು ಒಡೆಯುವ

Read More
ಕರಾವಳಿ

ಕಾಲೇಜು ಸಮೀಪ ಲವ್ ಜಿಹಾದ್ ಬ್ಯಾನರ್: ತೆರವಿಗೆ ಆಗ್ರಹ

ಪುತ್ತೂರು: ಇಲ್ಲಿನ ಖಾಸಗಿ ಕಾಲೇಜೊಂದರ ಮುಂಭಾಗದಲ್ಲಿ ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಬ್ಯಾನರ್ ಅಳವಡಿಸಲಾಗಿದ್ದು, ಇದು ವಿದ್ಯಾರ್ಥಿಗಳ ನಡುವೆ ಕೋಮು ದ್ವೇಷ ಹರಡುವ ಹುನ್ನಾರವಾಗಿದೆ. ಇದನ್ನು ತಕ್ಷಣವೇ

Read More
ಕರಾವಳಿ

ಸುಳ್ಯ: ಸರಣಿ ಅಪಘಾತ: ಬೈಕ್ ಸವಾರರು ಮತ್ತು ಕಾರು ಚಾಲಕನಿಗೆ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯ :ಮಾಣಿ ಮೈಸೂರು ಹೆದ್ದಾರಿ ಸುಳ್ಯ ಸಮೀಪ ಪಾಲಡ್ಕ ಎಂಬಲ್ಲಿ ಲಾರಿ, ಕಾರು ,ಬೈಕ್ ನಡುವೆ ಸರಣಿ ಅಪಘಾತವಾಗಿ ಬೈಕ್ ಸವಾರರಿಬ್ಬರು,ಹಾಗೂ ಕಾರು ಚಾಲಕ ಗಾಯಗೊಂಡು ಆಸ್ಪತ್ರೆ

Read More
ಕರಾವಳಿ

ಜಯನಗರ ಅಂಗನವಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ

ಜಯನಗರ ಮೂರನೇ ವಾರ್ಡಿನ ಅಂಗನವಾಡಿ ರಸ್ತೆಗೆ ಕಾಂಕ್ರೀಕರಣಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. 15ನೇ ಹಣಕಾಸಿನ ಯೋಜನೆ ಯಡಿಯಲ್ಲಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ 80

Read More
ಕರಾವಳಿ

ಅನ್ಯಕೋಮಿನ ಯುವಕನಿಗೆ ಲವ್ ಲೆಟರ್ ಬರೆದ ವಿದ್ಯಾರ್ಥಿನಿ : ಗೊಂದಲ, ಅಮಾನತು

ವಿಟ್ಲ: ಖಾಸಗಿ ಸಂಸ್ಥೆಯ ಹಿಂದೂ ವಿದ್ಯಾರ್ಥಿನಿಯೋರ್ವಳು ಅನ್ಯಕೋಮಿನ ಯುವಕನಿಗೆ ಪ್ರೇಮ ಪತ್ರ ಬರೆದ ವಿಚಾರವಾಗಿ ಗೊಂದಲ ಉಂಟು ಮಾಡಿದ ಎರಡು ಕೋಮಿಗೆ ಸೇರಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ

Read More
error: Content is protected !!