ಕರಾವಳಿರಾಜಕೀಯ

ಸ್ವಪಕ್ಷದ, ನಾಯಕರ ವಿರುದ್ಧ ಬಿಜೆಪಿ ಮುಖಂಡರೋರ್ವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್: ಆಡಿಯೋ ನನ್ನದಲ್ಲ- ಅಬ್ದುಲ್ ಕುಂಞಿ

ಪುತ್ತೂರು: ಬಿಜೆಪಿ ಮುಖಂಡರೋರ್ವರು ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದು ಪುತ್ತೂರು ತಾ.ಪಂ ಕೆಡಿಪಿ ಸದಸ್ಯರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಅಬ್ದುಲ್ ಕುಂಞಿ ಅವರದ್ದು ಎನ್ನಲಾಗುತ್ತಿದೆ. ಆದರೆ ಅಬ್ದುಲ್ ಕುಂಞಿಯವರು ವೈರಲ್ ಆಗಿರುವ ಆಡಿಯೋ ನನ್ನದಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ವೈರಲ್ ಆಗಿರುವ ಆಡಿಯೋದಲ್ಲಿ ಬಿಜೆಪಿ ಪಕ್ಷದ ಕೆಲ ನಾಯಕರ ವಿರುದ್ಧ ಮತ್ತು ಸಂಸದರ, ಶಾಸಕರ ವಿರುದ್ದ ಮಾತನಾಡಲಾಗಿದ್ದು ವಿವಿಧ ವಿಚಾರಗಳಲ್ಲಿ ಅಸಮಾದಾನವನ್ನು ಹೊರಹಾಕಿ ಮಾತುಕತೆ ನಡೆಸಲಾಗಿದೆ. ಮಾತನಾಡಿದವರಲ್ಲಿ ಓರ್ವರು ಅಬ್ದುಲ್ ಕುಂಞಿ ಎನ್ನಲಾಗಿದ್ದು ಅವರ ಜೊತೆ ಮಾತನಾಡಿರುವ ಇನ್ನೋರ್ವ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಸದ್ಯ ಪುತ್ತೂರು ರಾಜಕೀಯ ವಲಯದಲ್ಲಿ ವೈರಲ್ ಆಡಿಯೋ ತುಸು ಮಟ್ಟಿನ ಚರ್ಚೆಗೆ ಗ್ರಾಸವಾಗಿದೆ.

ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ನಾನಲ್ಲ- ಅಬ್ದುಲ್ ಕುಂಞಿ: ವೈರಲ್ ಆಗಿರುವ ಆಡಿಯೋ ದಲ್ಲಿ ಮಾತನಾಡಿರುವ ವ್ಯಕ್ತಿ ನಾನಲ್ಲ. ಆ ದ್ವನಿ ಸುರುಳಿ ನನ್ನದಲ್ಲ. ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಯಾರೋ ಈ ರೀತಿಯ ಷಡ್ಯಂತ್ರ ಮಾಡಿ ನನ್ನ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪುತ್ತೂರು ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷರು ಆಗಿರುವ ಅಬ್ದುಲ್ ಕುಂಞಿ ಪಟ್ಟೆ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಪಕ್ಷದ ವಿರುದ್ಧವಾಗಲಿ, ಶಾಸಕರ, ಸಂಸದರ ವಿರುದ್ಧವಾಗಲಿ, ನಾನು ಯಾವತ್ತೂ ಮಾತನಾಡಿಲ್ಲ.
ಶಾಸಕ ಸಂಜೀವ ಮಠಂದೂರು ಅವರಿಗೆ ಬೇಕಾಗಿ ನಾನು ಜೀವ ಕೊಡಲೂ ಸಿದ್ದನಿದ್ದೇನೆ. ಇದರ ಸತ್ಯಾಂಶ ಬಯಲಾಗಬೇಕು. ನಾನು ತಪ್ಪು ಮಾಡಿದ್ದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!