ಕರಾವಳಿ

ಅನ್ಯಕೋಮಿನ ಯುವಕನಿಗೆ ಲವ್ ಲೆಟರ್ ಬರೆದ ವಿದ್ಯಾರ್ಥಿನಿ : ಗೊಂದಲ, ಅಮಾನತು



ವಿಟ್ಲ: ಖಾಸಗಿ ಸಂಸ್ಥೆಯ ಹಿಂದೂ ವಿದ್ಯಾರ್ಥಿನಿಯೋರ್ವಳು ಅನ್ಯಕೋಮಿನ ಯುವಕನಿಗೆ ಪ್ರೇಮ ಪತ್ರ ಬರೆದ ವಿಚಾರವಾಗಿ ಗೊಂದಲ ಉಂಟು ಮಾಡಿದ ಎರಡು ಕೋಮಿಗೆ ಸೇರಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ ಬಗ್ಗೆ ವರದಿಯಾಗಿದೆ.

ಖಾಸಗಿ ಸಂಸ್ಥೆಯ ಪದವಿ ವಿದ್ಯಾರ್ಥಿನಿಯೋರ್ವಳು ಅನ್ಯಕೋಮಿನ ಯುವಕನಿಗೆ ಪ್ರೇಮಪತ್ರ ಬರೆದಿದ್ದಾಳೆ ಎನ್ನಲಾಗಿದೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೇಪು ಮೂಲದ ಹಿಂದೂ ವಿದ್ಯಾರ್ಥಿನಿ ಮತ್ತು ಕೆಲಿಂಜದ ಮುಸ್ಲಿಂ ವಿದ್ಯಾರ್ಥಿ ತಿಂಗಳ ಹಿಂದಿನಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ಹಿಂದೆಯೇ ಪ್ರಾಂಶುಪಾಲರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಲವ್ ಲೇಟರ್ ಪತ್ತೆಯಾಗಿತ್ತು. ಎರಡು ಕೋಮಿನ ವಿದ್ಯಾರ್ಥಿಗಳು ಗುಂಪು ಸೇರಿದ್ದರು. ಶಿಸ್ತು ಪಾಲಿಸುವ ದೃಷ್ಠಿಯಿಂದ ಇತ್ತಂಡ ಕೆಲವು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಮಾನತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!