ಕರಾವಳಿರಾಜಕೀಯ

ಸುಳ್ಯ: ಕಾಂಗ್ರೆಸ್ ನಲ್ಲಿ ಮುಂದುವರಿದ ಆಂತರಿಕ ಗುದ್ದಾಟ: ಕಾಂಗ್ರೆಸ್ ಮುಖಂಡ ಟಿ.ಎಂ.ಶಹೀದ್ ವಿರುದ್ಧ ಅಸಮಾಧಾನ ತೋಡಿಕೊಂಡ ಸೋಮಶೇಖರ್ ಕೊಯಿಂಗಾಜೆ



ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಪಂಚಾಯತ್ ಅಧ್ಯಕ್ಷರನ್ನು ಬೆಂಬಲಿಸುತ್ತಿರುವ ಟಿ.ಎಂ. ಶಹೀದ್ ಅವರೇ ಕಾರಣ,’ಸಂಪಾಜೆಯಲ್ಲಿ ಪಕ್ಷವನ್ನು ಕಟ್ಟಿ ಆಡಳಿತಕ್ಕೆ ತರಬೇಕೆ ಹೊರತು ಪಕ್ಷವನ್ನು ಒಡೆಯುವ ಕೆಲಸ ಮಾಡುವುದು ಸರಿಯಲ್ಲ” ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ, ಪಂಚಾಯತ್ ಸದಸ್ಯರೂ ಆಗಿರುವ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ.


ಸಂಪಾಜೆ ಗ್ರಾ.ಪಂ. ಸದಸ್ಯರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತಾಡಿರುವ ಅವರು
ಹಮೀದ್‌ರನ್ನು ಬೆಂಬಲಿಸುವುದು ಟಿ.ಎಂ. ಶಹೀದ್. ಇದು ಪಕ್ಷದ ನಾಯಕರ ಗಮನಕ್ಕೂ ಬಂದ ವಿಷಯವಾಗಿದೆ.
ಮಾಧ್ಯಮದ ಮುಂದೆ ಮಾತ್ರ ನಾನು ಹಮೀದ್ ಅವರ ಜತೆಗಿಲ್ಲ ಎಂದು ಅವರು ಹೇಳುತ್ತಾರೆ. ಶಹೀದ್ ಅವರು ಸಂಪಾಜೆಯಲ್ಲಿ ಪಕ್ಷವನ್ನು ಕಟ್ಟಿ ಆಡಳಿತಕ್ಕೆ ತರಲಿ. ಅದು ಬಿಟ್ಟು ಪಕ್ಷವನ್ನು ಒಡೆಯುವವನು ನಾಯಕನಾಗುವುದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.


ಸಂಪಾಜೆ ಗ್ರಾಮ ಪಂಚಾಯತ್ ಗೆ ನಾಲ್ವರು ಸದಸ್ಯರು ರಾಜೀನಾಮೆ ನೀಡಿದ್ದು ಅದನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದ್ದರೂ ಸುಳ್ಳು ದಾಖಲೆ ಸೃಷ್ಠಿಸಿ ಮೂವರು ಸದಸ್ಯರನ್ನು ಮಾತ್ರ ಸದಸ್ಯರನ್ನು ಅನರ್ಹಗೊಳಿಸಿ ದುರುದ್ದೇಶವನ್ನು ಅನಾವರ್ಣ ಮಾಡಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸೋಮಶೇಖರ ಕೊಯಿಂಗಾಜೆ ಹೇಳಿದರು.


ನ.25 ರಂದು ಪಂಚಾಯತ್ ಉಪಾಧ್ಯಕ್ಷರಾದ ಮೋನಾಲಿಸ, ಸದಸ್ಯರುಗಳಾದ ಶೌವಾದ್ ಗೂನಡ್ಕ, ವಿಮಲ ಪ್ರಸಾದ್ ರಾಜೀನಾಮೆ ನೀಡಿ ಡಿ.೫ರಂದು ನಾವೆಲ್ಲರೂ ರಾಜೀನಾಮೆ ಹಿಂಪಡೆಯಲು ಪಂಚಾಯತ್‌ಗೆ ಹೋಗಿ ಅರ್ಜಿ ಸಲ್ಲಿಸಿದ್ದೇವೆ.
ಪಂಚಾಯತ್ ಅಧ್ಯಕ್ಷರು 15 ದಿನ ಆಗುವವರೆಗೆ ಕಾದು ಅಧ್ಯಕ್ಷರು ಇಲ್ಲದ ಕಾನೂನನ್ನು ಸೃಷ್ಠಿಸಿಕೊಂಡು ದುರುದ್ಧೇಶ ದಿಂದಲೇ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ.
ಈ ರೀತಿಯ ನಡೆ ಸರಿಯಲ್ಲ. ಪಂಚಾಯತ್‌ನಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಶ್ನಿಸುವ ಸದಸ್ಯರು ಇರಬಾರದೆಂಬ ದೃಷ್ಠಿಯಿಂದ ಈ ರೀತಿ ಅಧ್ಯಕ್ಷರು ಮಾಡಿದ್ದಾರೆ ಎಂದು ಸೋಮಶೇಖರ್ ಕೊಯಿಂಗಾಜೆ ಆರೋಪಿಸಿದರು.


ಅಧಿಕಾರಕ್ಕಾಗಿ ಅಂಟಿಕ್ಕೊಂಡರೆ ಈ ರೀತಿ ಆಗುತ್ತದೆ. ಪಂಚಾಯತ್ ಚುನಾವಣೆಗಳು ಪಕ್ಷದ ಚೆಹ್ನೆಯಡಿಯಲ್ಲಿ ನಡೆಯುವುದಿಲ್ಲ ಆದರೆ ಒಂದು ಪಕ್ಷದ ಬೆಂಬಲಿಗರಾಗಿ ಚುನಾವಣೆಗೆ ನಿಂತರೆ ಅದರ ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಹಾಗು ಅವರಿಗೆ ಬೆಂಬಲ ನೀಡುವ ಪಂಚಾಯತ್ ಸದಸ್ಯರುಗಳು ತಾಕತ್ತಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲಿ. ಆವಾಗ ಅವರಿಗೆ ಗೊತ್ತಾಗುತ್ತದೆ ಜನರು ಯಾರ ಪರ ಇದ್ದಾರೆ ಎಂದು.
ಪಂಚಾಯತ್‌ನಲ್ಲಿ ಏನೆಲ್ಲ ಭ್ರಷ್ಟಾಚಾರಗಳು ಆಗುತ್ತಿದೆ ಎನ್ನುವುದನ್ನು ಮುಂದಿನ ದಿನದಲ್ಲಿ ದಾಖಲೆ ಸಮೇತ ನಾನೇ ತೋರಿಸುತ್ತೇನೆ” ಎಂದು ಹೇಳಿದರು.


ನಾವು ನೀಡಿರುವ ರಾಜೀನಾಮೆಗಳು ಅಂಗೀಕಾರ ಮಾಡಿದ್ದರೂ ಅದು ಸಿಂಧುವಾಗುವುದಿಲ್ಲ. ಪಂಚಾಯತ್ ನಿಯಮದಲ್ಲಿ ಇಲ್ಲದ ಕಾನೂನನ್ನು ಇವರು ಮಾಡುತ್ತಿದ್ದಾರಷ್ಠೆ.ಈ ಎಲ್ಲಾ ಘಟನೆಯ ಕುರಿತು ಪುತ್ತೂರು ಸಹಾಯಕ ಕಮಿಷನರ್‌ರನ್ನು ಸಂಪರ್ಕಿಸಿ ಚರ್ಚೆ ನಡೆಸಿದಾಗ ಅವರು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ನಮಗೆ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ. ಬೋಗಸ್ ದಾಖಲೆಯನ್ನು ಸೃಷ್ಠಿಸಿರುವ ಪಂಚಾಯತ್ ಅಧ್ಯಕ್ಷರ ವಿರುದ್ಧ ನಾವು ಮಾನನಷ್ಟ ಮೊಕ್ಕದಮೆ ಹೂಡುತ್ತೇವೆ.
ಅವರ ಸದಸ್ಯತ್ವವನ್ನೇ ರದ್ದು ಗೊಳಿಸಬೇಕೆಂದು ಹೈಕೋರ್ಟು ಮೊರೆ ಹೋಗುತ್ತೇವೆ. ಸಂಪಾಜೆಯಲ್ಲಿ ಕುತಂತ್ರ ಮಾಡುವವರ ರಾಜಕೀಯವನ್ನು ಮಟ್ಟ ಹಾಕುವುದೇ ನನ್ನ ಮುಂದಿನ ನಡೆ ಎಂದು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಲಿಸ್ಸಿ ಮೋನಾಲಿಸ, ಶೌವಾದ್ ಗೂನಡ್ಕ, ವಿಮಲ ಪ್ರಸಾದ್ ಇದ್ದರು.

Leave a Reply

Your email address will not be published. Required fields are marked *

error: Content is protected !!