ಕರಾವಳಿ

ಕರಾವಳಿಕ್ರೈಂ

ಮಂಗಳೂರು: ಮೊಬೈಲ್ ಬಳಸದಂತೆ ಬುದ್ದಿವಾದ ಹೇಳಿದ ತಾಯಿ: ಬೇಸರಗೊಂಡು ಆತ್ಮಹತ್ಯೆಗೆ ಶರಣಾದ ಬಾಲಕ

ಮಂಗಳೂರು: ತಾಯಿ ಬುದ್ದಿವಾದ ಹೇಳಿದ್ದಕ್ಕೆ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಮುರ ಎಂಬಲ್ಲಿ ನಡೆದಿದೆ. ಮೊಬೈಲ್ ಬಳಸದಂತೆ

Read More
ಕರಾವಳಿರಾಜಕೀಯರಾಜ್ಯರಾಷ್ಟ್ರೀಯ

ಫೆಬ್ರವರಿ 11: ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ

ಕೇಂದ್ರ ಗೃಹ ಸಚಿವ, ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಫೆ.11ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ತೆಂಕಿಲ

Read More
ಕರಾವಳಿಕ್ರೈಂ

ನರಿಮೊಗರು: ಬ್ಯಾಂಕ್ ಉದ್ಯೋಗಿ ಜಗದೀಶ್ ರೈ ಆತ್ಮಹತ್ಯೆ

ಪುತ್ತೂರು: ನರಿಮೊಗರು ನಿವಾಸಿಯಾಗಿದ್ದು ಮಂಗಳೂರು ಕೆ.ಎಸ್.ರಾವ್ ರಸ್ತೆಯ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಅಕೌಂಟ್ ಸೆಕ್ಷನ್‌ನಲ್ಲಿ ಉದ್ಯೋಗಿಯಾಗಿದ್ದ ಜಗದೀಶ್ ರೈ(51.ವ) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಗದೀಶ್ ರೈ ಅವರು ಬೋಳಾರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಕಳೆದ 23 ವರ್ಷಗಳಿಂದ ಉದ್ಯೋಗಿಯಾಗಿದ್ದ ಅವರು ಬೋಳಾರದ ಅಪಾರ್ಟ್ಮೆಂಟ್‌ನಲ್ಲಿ ನೆಲೆಸಿದ್ದರು. ಪತ್ನಿ ರೇಖಾ ಅವರು ಮಂಗಳೂರಿನ ಪಿಎಫ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮೃತರು ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಅಕ್ಷಣ್ ರೈ ಹಾಗೂ ಪುತ್ರಿ ಆದಿತ್ರಿ ಅವರನ್ನು ಅಗಲಿದ್ದಾರೆ. ಡೆತ್‌ನೋಟ್ ಬರೆದಿದ್ದು ಆತ್ಮಹತ್ಯೆ: ನನ್ನ ಸಾವಿಗೆ ನಾನೇ ಕಾರಣ. ತಾಯಿ ಮತ್ತು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇಂಜಿನಿಯರಿಂಗ್ ಓದುವ ಪುತ್ರ ಅಕ್ಷಣ್ ರೈಯವರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಗದೀಶ್ ರೈ ದಂಪತಿಗೆ ಯಾವುದೇ ಹಣಕಾಸಿನ ತೊಂದರೆ ಇರಲಿಲ್ಲ. ಜಗದೀಶ್ ಅವರಿಗೆ ಯಾವುದೇ ದುರಭ್ಯಾಸವೂ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದು ಆದರೂ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಮೃತರ ನರಿಮೊಗರುವಿನ ಮನೆಗೆ ಶಾಸಕ ಸಂಜೀವ ಮಠಂದೂರು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತರಾಮ ರೈ ಸವಣೂರು  ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಜಯರಾಮ ಪೂಜಾರಿ ನರಿಮೊಗರು, ಪ್ರವೀಣ್ ನಾಯ್ಕ ಸೇರಾಜೆ, ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.

Read More
ಕರಾವಳಿರಾಜಕೀಯರಾಜ್ಯ

ಪುತ್ತೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಕಲ್ಲೇಗ..?

ಪುತ್ತೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಕಲ್ಲೇಗ ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವ ಮಾಹಿತಿ ಲಭ್ಯವಾಗಿದೆ. ಅಶ್ರಫ್ ಕಲ್ಲೇಗ ಆವರು ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನೇ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಲು ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಜ.30ರಂದು ಪುತ್ತೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲೂ ಅಶ್ರಫ್ ಕಲ್ಲೇಗ ಪರವಾಗಿ ಕಾರ್ಯಕರ್ತರು ಬ್ಯಾಟ್ ಬೀಸಿದ್ದು ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರಲ್ಲೂ ಅಶ್ರಫ್ ಕಲ್ಲೇಗರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅಶ್ರಫ್ ಕಲ್ಲೇಗ ಅವರು ಈ ಹಿಂದೆಯೇ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬೇರೆಯವರಿಗೆ ಟಿಕೆಟ್ ಸಿಕ್ಕಿದರೂ ಮುನಿಸಿಕೊಳ್ಳದ ಅಶ್ರಫ್ ಕಲ್ಲೇಗ ಅವರು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದರು. ಮಾತ್ರವಲ್ಲದೇ ಯಾವುದೇ ಸಂದರ್ಭದಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆಸದೆ ಕ್ಲೀನ್ ಇಮೇನ್ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಟಿಕೆಟ್ ಖಚಿತ ಎನ್ನುವ ಮಾತುಗಳು ಬಲವಾಗಿ ಕೇಳಿ ಬಂದಿದೆ. ಜೆಡಿಎಸ್ ಅಭ್ಯರ್ಥಿ ಸ್ಥಾನಕ್ಕೆ ಅಶ್ರಫ್ ಕಲ್ಲೇಗ ಮಾತ್ರವಲ್ಲದೇ ಪಕ್ಷದ ಪ್ರಮುಖರಾದ ಮೀರಾ ಸಾಹೇಬ್ ಕಡಬ, ಐ.ಸಿ ಕೈಲಾಸ್, ಇಬ್ರಾಹಿಂ ಗೋಳಿಕಟ್ಟೆ ಅವರ ಹೆಸರೂ ಕೇಳಿ ಬರುತ್ತಿದೆ. ಆದರೆ ಯಾವುದೂ ಅಂತಿಮವಾಗಿಲ್ಲ. 

Read More
ಕರಾವಳಿಕ್ರೈಂ

ಸೌದಿ ಅರೇಬಿಯಾದ ಕರೆನ್ಸಿ ನೀಡುವುದಾಗಿ ನಂಬಿಸಿ 4 ಲಕ್ಷ ರೂ ವಂಚನೆ

ಮಂಗಳೂರು: ವಿದೇಶಿ ಕರೆನ್ಸಿ ಮತ್ತು ಚಿನ್ನ ನೀಡುವುದಾಗಿ ಹೇಳಿ ಹಣ ಪಡೆದು ಕಾಗದದ ಕಟ್ಟನ್ನು ನೀಡಿ 4 ಲ.ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಮುಡಿಪು ಜಂಕ್ಷನ್‌ನಲ್ಲಿರುವ ತಾಜ್‌ಬುಕ್‌

Read More
ಕರಾವಳಿಕ್ರೈಂ

ಪುತ್ತೂರು ಕಂಬಳ ಗದ್ದೆಯಲ್ಲಿ ಪ್ರೇಯಸಿಯೊಂದಿಗೆ ಮಾತನಾಡಿಕೊಂಡಿದ್ದ ಯುವಕನಿಗೆ ಹಲ್ಲೆ: ಪ್ರಕರಣ ದಾಖಲು

ಪುತ್ತೂರು: ಕಂಬಳ ಗದ್ದೆಯಲ್ಲಿ ಪ್ರೇಯಸಿಯೊಂದಿಗೆ ಮಾತನಾಡಿಕೊಂಡಿದ್ದ ಮಂಗಳೂರಿನ ಯುವಕನನ್ನು ಯುವತಿಯ ಮಾಜಿ ಪ್ರೇಮಿ, ಆತನ ಸ್ನೇಹಿತರೊಂದಿಗೆ ಸೇರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿರುವ ಕುರಿತು ಪುತ್ತೂರು

Read More
ಕರಾವಳಿ

ಪುತ್ತೂರು: ಮೆಡಿಕಲ್ ಶಾಪ್ ನಲ್ಲಿ ಗ್ರಾಹಕನ ರಂಪಾಟ

ಪುತ್ತೂರು: ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ಗ್ರಾಹಕ ಮತ್ತು ಮೆಡಿಕಲ್ ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಹಲವರು ಮಂದಿ ಜಮಾಯಿಸಿದ ಘಟನೆ ಸೋಮವಾರ

Read More
ಕರಾವಳಿ

ರಸ್ತೆ ಅಪಘಾತ: ನಟ ಅರವಿಂದ ಬೋಳಾರ್ ಆಸ್ಪತ್ರೆಗೆ ದಾಖಲು

ಮಂಗಳೂರು : ತುಳು ಚಿತ್ರರಂಗ, ರಂಗಭೂಮಿಯ ಪ್ರಖ್ಯಾತ ನಟ ಅರವಿಂದ ಬೋಳಾರ್ ಜ.30ರಂದು ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂಪ್ ವೆಲ್ ಬಳಿ ಅವರು

Read More
ಕರಾವಳಿ

ಸುಳ್ಯ: ಚಿರತೆ ದಾಳಿಗೆ ದನ ಬಲಿ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಂಚಡ್ಕ ಪರಿಸರದಲ್ಲಿ ಚಿರತೆ ದಾಳಿಯಿಂದ ದನವೊಂದು ಸಾವಿಗೀಡಾದ ಘಟನೆ ಜನವರಿ 29ರಂದು ವರದಿಯಾಗಿದೆ. ಕುಂಚಡ್ಕ ನಿವಾಸಿ ದೊಡ್ಡಯ್ಯ ಗೌಡ ರವರ ದನ

Read More
ಕರಾವಳಿಕ್ರೈಂರಾಜ್ಯ

ಬೆಳ್ತಂಗಡಿ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯಿಂದ ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆ: ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿ

ಬೆಳ್ತಂಗಡಿ: ಇನ್ಸ್ಟಾಗ್ರಾಮ್ ನಲ್ಲಿ ಪರಿಚಿತರಾಗಿದ್ದ ವ್ಯಕ್ತಿಯೋರ್ವರು ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಹಾಕಿರುವ ಹಿನ್ನೆಲೆಯಲ್ಲಿ ಹೆದರಿ ಬೆಳ್ತಂಗಡಿ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಧರ್ಮಸ್ಥಳ ಗ್ರಾಮದ ಅಶೋಕ್ ನಗರ ನಿವಾಸಿ, ಬೆಳ್ತಂಗಡಿ ಖಾಸಗಿ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ (19.ವ) ಮೃತ ವಿದ್ಯಾರ್ಥಿ. ಬೆಳ್ತಂಗಡಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹರ್ಷಿತ್ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಕೆಲವು   ದಿನಗಳ ಹಿಂದೆ ಓರ್ವ ಅಪರಿಚಿತ ವ್ಯಕ್ತಿಯು ಸಂಪರ್ಕಕ್ಕೆ ಸಾಧಿಸಿದ್ದು ಆ ನಂತರ ಹರ್ಷಿತ್ ಆತನೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಚಾಟಿಂಗ್ ಮಾಡಿಕೊಂಡಿದ್ದ ಎನ್ನಲಾಗಿದೆ. ಆ ಬಳಿಕ ಅಪರಿಚಿತ ವ್ಯಕ್ತಿಯು ಮೊಬೈಲ್‌ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು ನಿಮ್ಮ ವೈಯಕ್ತಿಕ ವಿಡಿಯೋ ನನ್ನ ಬಳಿ ಇದೆ. ಅದನ್ನು ನಾನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ. ವೈರಲ್ ಮಾಡಬಾರದು ಎಂದಾದರೆ ತನಗೆ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದನು. ಇದಕ್ಕೆ ಹರ್ಷಿತ್ ಕೆಲ ದಿನಗಳ ಸಮಯಾವಕಾಶ ನೀಡುವಂತೆ ಕೇಳಿದ್ದರು. ಆದರೆ ಸಮಯಾವಕಾಶದ ವರೆಗೂ ಹಣ ಹೊಂದಿಸಲು ಸಾಧ್ಯವಾಗದ ಹರ್ಷಿತ್ ತನ್ನ ಮಾನ ಹೋಗಬಹುದೆಂದು ಹೆದರಿ ಇಲಿ ಪಾಷಾನ ಸೇವಿಸಿದ್ದು ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ.29ರಂದು ಅವರು ಕೊನೆಯುಸಿರೆಳೆದಿದ್ದಾರೆ.

Read More
error: Content is protected !!