ಪುತ್ತೂರು: ಮೆಡಿಕಲ್ ಶಾಪ್ ನಲ್ಲಿ ಗ್ರಾಹಕನ ರಂಪಾಟ
ಪುತ್ತೂರು: ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ಗ್ರಾಹಕ ಮತ್ತು ಮೆಡಿಕಲ್ ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಹಲವರು ಮಂದಿ ಜಮಾಯಿಸಿದ ಘಟನೆ ಸೋಮವಾರ ನಡೆದಿದೆ.
ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ
ಮೆಡಿಕಲ್ ಅಂಗಡಿಯಲ್ಲಿ ಆವಾಂತರ ಸೃಷ್ಟಿಸಿದ್ದ ಗ್ರಾಹಕ ನಾಪತ್ತೆಯಾಗಿದ್ದಾನೆ. ಜನ ಸೇರಿದ ಕಾರಣ ಕೆಲಕಾಲ ಟ್ರಾಫಿಕ್ ಜಾಮ್ ಕೂಡಾ ಉಂಟಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.