ಕರಾವಳಿ

ರಸ್ತೆ ಅಪಘಾತ: ನಟ ಅರವಿಂದ ಬೋಳಾರ್ ಆಸ್ಪತ್ರೆಗೆ ದಾಖಲು

ಮಂಗಳೂರು : ತುಳು ಚಿತ್ರರಂಗ, ರಂಗಭೂಮಿಯ ಪ್ರಖ್ಯಾತ ನಟ ಅರವಿಂದ ಬೋಳಾರ್ ಜ.30ರಂದು ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಂಪ್ ವೆಲ್ ಬಳಿ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಬೋಳಾರ್ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!