ಮಂಗಳೂರು: ಮೊಬೈಲ್ ಬಳಸದಂತೆ ಬುದ್ದಿವಾದ ಹೇಳಿದ ತಾಯಿ: ಬೇಸರಗೊಂಡು ಆತ್ಮಹತ್ಯೆಗೆ ಶರಣಾದ ಬಾಲಕ
ಮಂಗಳೂರು: ತಾಯಿ ಬುದ್ದಿವಾದ ಹೇಳಿದ್ದಕ್ಕೆ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಮುರ ಎಂಬಲ್ಲಿ ನಡೆದಿದೆ. ಮೊಬೈಲ್ ಬಳಸದಂತೆ ತಾಯಿ ಗದರಿಸಿದ್ದರು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜ್ಞಾನೇಶ್ (14. ವ) ಮೃತ ಬಾಲಕ ಎಂದು ತಿಳಿದು ಬಂದಿದೆ.
ಜ್ಞಾನೇಶ್ ಹೆಚ್ಚು ಮೊಬೈಲ್ ಬಳಸುವ ವಿಚಾರದಲ್ಲಿ ಮನೆಯಲ್ಲಿ ತಾಯಿ ಸ್ವಲ್ಪ ಗದರಿಸಿದ್ದು ಇದರಿಂದ ಬೇಸರಗೊಂಡ ಬಾಲಕ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಕ್ಷಣ ನೇಣು ಬಿಗಿದ ಶಾಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಬಾಲಕ ಮೃತಪಟ್ಟಿರುವುದು ತಿಳಿದು ಬಂದಿದೆ.