ಕರಾವಳಿಕ್ರೈಂ

ನರಿಮೊಗರು: ಬ್ಯಾಂಕ್ ಉದ್ಯೋಗಿ ಜಗದೀಶ್ ರೈ ಆತ್ಮಹತ್ಯೆ



ಪುತ್ತೂರು: ನರಿಮೊಗರು ನಿವಾಸಿಯಾಗಿದ್ದು ಮಂಗಳೂರು ಕೆ.ಎಸ್.ರಾವ್ ರಸ್ತೆಯ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಅಕೌಂಟ್ ಸೆಕ್ಷನ್‌ನಲ್ಲಿ ಉದ್ಯೋಗಿಯಾಗಿದ್ದ ಜಗದೀಶ್ ರೈ(51.ವ) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜಗದೀಶ್ ರೈ ಅವರು ಬೋಳಾರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಿಸಿಸಿ ಬ್ಯಾಂಕಿನಲ್ಲಿ ಕಳೆದ 23 ವರ್ಷಗಳಿಂದ ಉದ್ಯೋಗಿಯಾಗಿದ್ದ ಅವರು ಬೋಳಾರದ ಅಪಾರ್ಟ್ಮೆಂಟ್‌ನಲ್ಲಿ ನೆಲೆಸಿದ್ದರು. ಪತ್ನಿ ರೇಖಾ ಅವರು ಮಂಗಳೂರಿನ ಪಿಎಫ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮೃತರು ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಅಕ್ಷಣ್ ರೈ ಹಾಗೂ ಪುತ್ರಿ ಆದಿತ್ರಿ ಅವರನ್ನು ಅಗಲಿದ್ದಾರೆ.

ಡೆತ್‌ನೋಟ್ ಬರೆದಿದ್ದು ಆತ್ಮಹತ್ಯೆ: ನನ್ನ ಸಾವಿಗೆ ನಾನೇ ಕಾರಣ. ತಾಯಿ ಮತ್ತು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇಂಜಿನಿಯರಿಂಗ್ ಓದುವ ಪುತ್ರ ಅಕ್ಷಣ್ ರೈಯವರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಗದೀಶ್ ರೈ ದಂಪತಿಗೆ ಯಾವುದೇ ಹಣಕಾಸಿನ ತೊಂದರೆ ಇರಲಿಲ್ಲ. ಜಗದೀಶ್ ಅವರಿಗೆ ಯಾವುದೇ ದುರಭ್ಯಾಸವೂ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದು ಆದರೂ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ಮೃತರ ನರಿಮೊಗರುವಿನ ಮನೆಗೆ ಶಾಸಕ ಸಂಜೀವ ಮಠಂದೂರು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತರಾಮ ರೈ ಸವಣೂರು  ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಜಯರಾಮ ಪೂಜಾರಿ ನರಿಮೊಗರು, ಪ್ರವೀಣ್ ನಾಯ್ಕ ಸೇರಾಜೆ, ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!