ಪುತ್ತೂರು ಕಂಬಳ ಗದ್ದೆಯಲ್ಲಿ ಪ್ರೇಯಸಿಯೊಂದಿಗೆ ಮಾತನಾಡಿಕೊಂಡಿದ್ದ ಯುವಕನಿಗೆ ಹಲ್ಲೆ: ಪ್ರಕರಣ ದಾಖಲು
ಪುತ್ತೂರು: ಕಂಬಳ ಗದ್ದೆಯಲ್ಲಿ ಪ್ರೇಯಸಿಯೊಂದಿಗೆ ಮಾತನಾಡಿಕೊಂಡಿದ್ದ ಮಂಗಳೂರಿನ ಯುವಕನನ್ನು ಯುವತಿಯ ಮಾಜಿ ಪ್ರೇಮಿ, ಆತನ ಸ್ನೇಹಿತರೊಂದಿಗೆ ಸೇರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಕೋಡಿಕಲ್ ರಸ್ತೆ 17ನೇ ವಾರ್ಡ್ ಬಾಪೂಜಿನಗರ ಮನೆ ದಿ.ಶಂಕರ್‌ರವರ ಮಗ ಸಾಗರ್(23ವ.)ಹಲ್ಲೆಗೊಳಗಾದಯುವಕ. ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಹಾಗೂ ಹೇಮಂತ್ ಆರೋಪಿಗಳು.
ನಾನು ಜ.28ರಂದು ಪುತ್ತೂರು ಕಂಬಳಕ್ಕೆ ಬಂದಿದ್ದು ಜ.29ರಂದು ಮಧ್ಯಾಹ್ನ 3 ಗಂಟೆ ಸಮಯ ತನ್ನ ಲವ್ವರ್ ವೇರಿನಾಳೊಂದಿಗೆ ಕಂಬಳ ಗದ್ದೆಯಲ್ಲಿ ಮಾತನಾಡುತ್ತಿದ್ದ ವೇಳೆ ಕೌಶಿಕ್ ಎಂಬಾತ ನನ್ನ ಬಳಿ ಬಂದು, ನೀನು ಯಾರು..?ಎಲ್ಲಿಯವ..?ನಿನಗೂ ಆಕೆಗೂ ಏನು ಸಂಬಂಧ..? ಎಂದು ಕೇಳಿದ್ದು ಆಗ ನಾನು , ವೇರಿನಾಳು ನನ್ನ ಲವ್ವರ್ ಎಂದು ಹೇಳಿದೆ. ಬಳಿಕ ನಾನು ಮತ್ತು ಜೊತೆಗಿದ್ದ ದುರ್ಗಾಪ್ರಸಾದ್‌ರವರನ್ನು ಕೌಶಿಕ್ ಪಕ್ಕಕ್ಕೆ ಕರೆದುಕೊಂಡು ಹೋಗಿ, ನಾನು ವೇರಿನಾಳ ಲವ್ವರ್, ನೀನು ಯಾಕೆ ಆಕೆಯನ್ನು ಲವ್ ಮಾಡುತ್ತೀ? ಎಂದು ಹೇಳಿ, ನನ್ನನ್ನು ಮತ್ತು ದುರ್ಗಾಪ್ರಸಾದ್‌ರವರನ್ನು ಏಳ್ಮುಡಿ ಅಕ್ಷಯ ಚಿಕನ್ ಸೆಂಟರ್ ಬಳಿ ಬರುವಂತೆ ತಿಳಿಸಿದ್ದು ನಾವು ಅಲ್ಲಿಗೆ ಹೋದಾಗ ಅಲ್ಲಿ ವೇರಿನಾಳು ಇದ್ದು, ಕೌಶಿಕ್‌ನೊಂದಿಗೆ ಇತರ 6-7 ಜನ ಸೇರಿ ಅವರು, ಇಲ್ಲಿ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಜನರು ಇಲ್ಲದ ಸ್ಥಳಕ್ಕೆ ಹೋಗುವ ಎಂದು ತಿಳಿಸಿದ ಪ್ರಕಾರ ಅವರ ಜೊತೆ ಆಲ್ಟೋ ಕಾರ್(ಕೆ.ಎ35-ಎನ್:2190)ನಲ್ಲಿ ಹಾಗೂ ಇತರರು ಮೋಟಾರ್ ಸೈಕಲ್(ಕೆಎ-19:ಹೆಚ್.ಹೆಚ್ 7409 ಮತ್ತು ಕೆಎ-21:ಇಸಿ 3781)ನಲ್ಲಿ ಬಲ್ನಾಡ್‌ನಲ್ಲಿರುವ ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿ ಕೌಶಿಕ್ ಹಾಗೂ ಇತರ 6-7 ಜನರು ನನಗೆ ಹಾಗೂ ದುರ್ಗಾಪ್ರಸಾದ್‌ರವರಿಗೆ ಕೈಯಿಂದ ಹಾಗೂ ಕೈಗಳಲ್ಲಿ ಧರಿಸಿದ್ದ ಬಳೆಗಳಿಂದ ಹಲ್ಲೆ ನಡೆಸಿ ವೇರಿನಾಳನ್ನು ಲವ್ ಮಾಡಬಾರೆಂದು ಬೆದರಿಸಿ ಆ ಸಮಯ ಬಿಡಿಸಲು ಬಂದ ದುರ್ಗಾಪ್ರಸಾದ್‌ರವರಿಗೂ ಹಲ್ಲೆ ನಡೆಸಿದರು.
ಆ ಸಮಯ ನಾವು ಜೋರಾಗಿ ಬೊಬ್ಬೆ ಹೊಡೆದಾಗ ನೆರೆಕರೆಯವರು ಓಡಿ ಬರುವುದನ್ನು ಕಂಡು ನಮ್ಮನ್ನುದ್ದೇಶಿಸಿ ಮುಂದಕ್ಕೆ ವೇರಿನಾಳ ಸುದ್ದಿಗೆ ಬಂದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿರುತ್ತಾರೆ.
ಹಲ್ಲೆಯಿಂದ ಎಡ ಬದಿಯ ತಲೆ, ಬಲ ಪಕ್ಕೆಲುಬಿಗೆ, ಎಡಕೈಯ ರಟ್ಟೆಗೆ ನೋವಾಗಿದ್ದು, ದುರ್ಗಾಪ್ರಸಾದ್‌ರವರಿಗೆ ಗದ್ದ ಭಾಗ, ಕುತ್ತಿಗೆಯ ಭಾಗ ಹಾಗೂ ಎಡ ಕಾಲಿಗೆ ನೋವು ಆಗಿರುತ್ತದೆ” ಎಂದು ಸಾಗರ್‌ರವರು ಪುತ್ತೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.ಅವರು ನೀಡಿರು ದೂರಿನ ಮೇರೆಗೆ ಆರೋಪಿಗಳಾದ ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಹಾಗೂ ಹೇಮಂತ್ ವಿರುದ್ಧ ಕಲಂ: 143,147,323,324,506 ಜೊತೆಗೆ 149 ಐಪಿಸಿಯಡಿ ಪ್ರಕರಣ ದಾಖಲಾಗಿದೆ.