ಸುಳ್ಯ: ಚಿರತೆ ದಾಳಿಗೆ ದನ ಬಲಿ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಂಚಡ್ಕ ಪರಿಸರದಲ್ಲಿ ಚಿರತೆ ದಾಳಿಯಿಂದ ದನವೊಂದು ಸಾವಿಗೀಡಾದ ಘಟನೆ ಜನವರಿ 29ರಂದು ವರದಿಯಾಗಿದೆ.

ಕುಂಚಡ್ಕ ನಿವಾಸಿ ದೊಡ್ಡಯ್ಯ ಗೌಡ ರವರ ದನ ಮೇಯಲು ಹೋದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಹಿಂದೆಯು ಪರಿಸರದಲ್ಲಿ ಚಿರತೆ ಆಗಾಗ ಕಂಡು ಬರುತ್ತಿತ್ತು ಎನ್ನಲಾಗಿದೆ.
ದನದ ವಾರಸುದಾರರು ಸಂಬಂಧ ಪಟ್ಟ ಇಲಾಖೆಗೆ ವಿಷಯ ತಿಳಿಸಿರುತ್ತಾರೆ.
ಇಲಾಖೆಯ ಅಧಿಕಾರಿಗಳು ಬಂದ ನಂತರ ದನವನ್ನು ಹೊಂಡ ತೆಗೆದು ದಫನ ಕಾರ್ಯ ಮಾಡಲಾಗಿದೆ.
ಇದೀಗ ಚಿರತೆಯ ದಾಳಿಯ ಬಳಿಕ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.