ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು: ಮಹಿಳೆ ಮೃತ್ಯು
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೆದ್ದಾರಿ ಬದಿಯ ಗುಂಡಿಗೆ ಮಗುಚಿ ಬಿದ್ದು ಮಹಿಳೆ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಸೋಮವಾರ ಸಂಭವಿಸಿದೆ.
ಮೃತ ಮಹಿಳೆಯನ್ನು ಮಂಗಳೂರು ನಿವಾಸಿ ಭಾಗೀರಥಿ (62) ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ಮಗ, ಕಾರು ಚಾಲಕ ರೂಪೇಶ್ (29) ಹಾಗೂ ಸೊಸೆ ಸುಚಿತ್ರಾ (32) ಎಂದು ಹೆಸರಿಸಲಾಗಿದೆ. ಅಪಘಾತದಲ್ಲಿ 3 ವರ್ಷದ ಮಗು ಧನ್ವಿಶ್ ಯಾವುದೇ ಗಾಯಗಳಿಲ್ಲದೆ ಪಾರಾಗಿದೆ. ಈ ಬಗ್ಗೆ ಕುಂದಾಪುರ ನಿವಾಸಿ ಅಜಿತ್ (31) ಅವರು ಪೊಲೀಸರಿಗೆ ದೂರು ನೀಡಿದ್ದು, ಸೋಮವಾರ ಬೆಳಗಿನ ಜಾವ ಅಜಿತ್ ಅವರ ಸಂಬಂಧಿಕರಾದ ರೂಪೇಶ್ (29) ಅವರು ಚಾಲಕರಾಗಿ ತಾಯಿ ಭಾಗೀರಥಿ (62), ಪತ್ನಿ ಸುಚಿತ್ರ (32), ಹಾಗೂ ಮಗು ಧನ್ವಿಶ್ (3) ಅವರೊಂದಿಗೆ ಕಾರಿನಲ್ಲಿ ತುಮಕೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಾ, ಕಡೂರು-ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿಗೆ ತಲುಪಿದಾಗ, ಕಾರಿನ ಚಾಲಕ ರೂಪೇಶ ಅವರು ನಿದ್ದೆ ಮಂಪರಿನಲ್ಲಿ ಕಾರು ನಿಯಂತ್ರಣ
ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಗುಂಡಿಗೆ ಮಗುಚಿ ಬಿದ್ದು ಅಪಘಾತವಾಗಿ
ದೆ. ಅಪಘಾತದಿಂದ ಸುಚಿತ್ರ, ಕಾರು ಚಾಲಕ ರೂಪೇಶ ಹಾಗೂ ಭಾಗೀರಥಿ ಅವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಗಾಯಾಳುಗಳ ಪೈಕಿ ಭಾಗೀರಥಿ ಅವರು ದಾರಿ ಮಧ್ಯೆ ಮೃತಪಟ್ಟಿರುತ್ತಾರೆ.
ಧನ್ವಿಶ್(3) ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರಿ
ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ
ದೆ.