ಕುಶಾಲನಗರ :ಸರಣಿ ಕಳ್ಳತನ,ಗುಂಡೂರಾವ್ ಬಡಾವಣೆ ಮನೆಗೆ ನುಗ್ಗಿದ ಚಿನ್ನಾಭರಣ ದೋಚಿ ಪರಾರಿ
ಕೊಡಗು ಜಿಲ್ಲೆಯ ಕುಶಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆ, ಗುಂಡೂರಾವ್ ಬಡಾವಣೆ ಯಲ್ಲಿ ಮೇ 20ರಂದು ರಾತ್ರಿ ಸರಣಿ ಕಳ್ಳತನ ನಡೆದು ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ವರದಿಯಾಗಿದೆ.

ಸ್ಥಳೀಯ ನಿವಾಸಿ ಲತಾ ಹಾಗೂ ಮಂಜು ಎಂಬುವರ ಎರಡು ಮನೆಗೆ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಕುಶಾಲನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.