ಸಾಲ್ಮರ ದಾರುಲ್ ಹಸನಿಯಾ ಬುರೈದ ಸಮಿತಿ ಅಧ್ಯಕ್ಷರಾಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ
ಪುತ್ತೂರು: ದಾರುಲ್ ಹಸನಿಯಾ ಸಾಲ್ಮರ ಇದರ ಬುರೈದ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯ ಕೂರ್ನಡ್ಕ ಹಾಗೂ ಕೋಶಾಧಿಕಾರಿಯಾಗಿ ಜಾಬಿರ್ ಕೇಕನಾಜೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಅಡ್ಡೂರು, ಗೌರವ ಸಲಹೆಗಾರರಾಗಿ ಉಮರ್ ಮಲ್ಲೂರು ಮತ್ತು ಸೈಯ್ಯದ್ ಸಚ್ಚಾರಿಪೇಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಲೀಲ್ ಕೇಕನಾಜೆ, ಸಯ್ಯದ್ ವೈಎಂಕೆ, ಜೊತೆ ಕಾರ್ಯದರ್ಶಿಯಾಗಿ ಝಕರಿಯ ಕೊರಿಂಗಿಲ, ಶಂಸು ಸಚ್ಚಾರಿಪೇಟೆ, ಸಂಘಟನಾ ಕಾರ್ಯದರ್ಶಿಯಾಗಿ ಲತೀಫ್ ವೈಎಂಕೆ, ಪತ್ರಿಕಾ ಪ್ರತಿನಿಧಿಯಾಗಿ ಅಮ್ಮಿ ಕೊರಿಂಗಿಲ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ಬಾಸ್ ಅಲಿ ಕುಕ್ಕುವಳ್ಳಿ, ಮುಹಮ್ಮದ್ ಪಳ್ಳತ್ತೂರು, ಸಿರಾಜ್ ಮುಲ್ಕಿ, ಅಯಾಝ್ ಕೃಷ್ಣಾಪುರ, ರೌಫ್ ಕುಲಾಯಿ, ಅಬ್ದುಲ್ಲಾ ಕುಂಞ ಕೊಯ್ಲಾ, ರಝಾಕ್ ನೆಕ್ಕಿಲ್, ಹಾರಿಸ್ ಮಂಜನಾಡಿ, ಸಿನಾನ್ ಕೇಕನಾಜೆ, ಮುಜೀಬ್ ಕೇಕಾನಾಜೆ, ಅಜೀಜ್ ಬುಳೇರಿಕಟ್ಟೆ, ಸಂಶು ಸರಾವ್, ರಿಷಾದ್ ವೈಎಂಕೆ, ಇಸ್ಮಾಯಿಲ್ ಆನಡ್ಕ, ರಾಯಲ್ ದರ್ಬೆ, ಲತೀಫ್ ಹಾಜಿ ಕಲ್ಮರ, ರಮೀಝ್ ರೆಂಜ, ಮುನೀರ್ ಮಲ್ಲೂರು ಅವರನ್ನು ಆಯ್ಕೆ ಮಾಡಲಾಯಿತು. ಝಕರಿಯ ಕೊರಿಂಗಿಲ ಕಾರ್ಯಕ್ರಮ ನಿರೂಪಿಸಿದರು. ಇಸ್ಮಾಯಿಲ್ ಆನಡ್ಕ ವಂದಿಸಿದರು.