ಆಟವಾಡುತ್ತಿದ್ದ ಬಾಲಕಿಯ ಮೇಲೆ ದಾರಂದ ಬಿದ್ದು ದಾರುಣ ಮೃತ್ಯು
ಪುತ್ತಿಲ: ಹೊಸ ಮನೆಗೆ ಅಳವಡಿಸಲು ತಂದು ಇಟ್ಟಿದ್ದ ದಾರಂದ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆಯಲ್ಲಿ ಸಂಭವಿಸಿದೆ.
ಕೊನಲೆ ನಿವಾಸಿ ಹಾರೀಸ್ ಮುಸ್ಲಿಯಾರ್ ಮತ್ತು ಅಸ್ಮಾ ದಂಪತಿಯ ಪುತ್ರಿಕೇರ್ಯಾ ಸರಕಾರಿ ಶಾಲೆಯ 1ನೇ ತರಗತಿಯ ವಿದ್ಯಾರ್ಥಿನಿ ಅಲ್ಫಿಯಾ (6) ಮೃತ ಬಾಲಕಿ.
ಬಾಲಕಿಯ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲಿತ್ತು. ಅದಕ್ಕಾಗಿ ಮನೆಯ ಪಕ್ಕದಲ್ಲಿ ದಾರಂದವನ್ನು ತಂದಿರಿಸಿದ್ದರು. ಬಾಲಕಿ ಆಟವಾಡುತ್ತಿದ್ದಾಗ ದಾರಂದ ಆಕೆಯ ತಲೆಗೆ ಬಿದ್ದು ಗಂಭೀರ ಗಾಯವಾಗಿತ್ತು. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಆಕೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.