ಜ.5: ಸರ್ವೆ ಸೌಹಾರ್ದ ವೇದಿಕೆ ವತಿಯಿಂದ SPL ಸೀಸನ್-9 ಕ್ರಿಕೆಟ್ ಪಂದ್ಯಾಟ
ಪುತ್ತೂರು: ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ 9ನೇ ವರ್ಷದ ಸರ್ವೆ ಪ್ರೀಮಿಯರ್ ಲೀಗ್ ಸೀಸನ್-9 ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ಶಾಲೆಗೆ ಕೊಡುಗೆ ಹಸ್ತಾಂತರ, ಅರ್ಹ ಕುಟುಂಬಕ್ಕೆ ಕಿಟ್ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಗುರುತಿಸುವಿಕೆ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮ ಜ.5ರಂದು ಸರ್ವೆ ಗ್ರಾಮದ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ.

ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಬ್ಲಾಸ್ಟರ‍್ಸ್ ಕೂಡುರಸ್ತೆ, ಯಶಸ್ವಿ ಗೈಸ್ ನೆಕ್ಕಿತ್ತಡ್ಕ, ಟ್ರೋಫಿ ಫೈಟರ‍್ಸ್ ದರ್ಬೆ, ರೆಡ್ಕೋ ರೈಡರ‍್ಸ್ ಕೂಡುರಸ್ತೆ, ಬ್ರದರ‍್ಸ್ ನೇರೋಳ್ತಡ್ಕ ಹಾಗೂ ಯಂಗ್ ಫೈಟರ‍್ಸ್ ನೇರೋಳ್ತಡ್ಕ ತಂಡಗಳು ಭಾಗವಹಿಸಲಿದೆ ಎಂದು ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಹಾಗೂ ಎಸ್‌ಪಿಎಲ್ ಪಿಆರ್‌ಓ ಹೈದರಾಲಿ ಐವತ್ತೊಕ್ಲು ತಿಳಿಸಿದ್ದಾರೆ.