ಕರಾವಳಿ

ಕುಂಬ್ರ ಪೇಟೆಯಲ್ಲಿ “ಪೊರ್ಲುದ ಕುಂಬ್ರ” ಸೆಲ್ಫಿ ಪಾಯಿಂಟ್ ಲೋಕಾರ್ಪಣೆ

ಪುತ್ತೂರು: ಕುಂಬ್ರ ವರ್ತಕರ ಸಂಘದ 20ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಪುತ್ತೂರು ಆಕರ್ಷಣ್ ಇಂಡಸ್ಟ್ರೀಸ್ ವತಿಯಿಂದ ಕುಂಬ್ರದಲ್ಲಿ “ಪೊರ್ಲುದ ಕುಂಬ್ರ” ಸೆಲ್ಫಿ ಪಾಯಿಂಟ್ ಲೋಕಾರ್ಪಣೆ ಕಾರ್ಯಕ್ರಮ ನ.16ರಂದು ನಡೆಯಿತು.

ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸೆಲ್ಫಿ ಪಾಯಿಂಟ್ ನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೆಲ್ಫಿ ಪಾಯಿಂಟ್ ಕೊಡುಗೆಯಾಗಿ ನೀಡಿದ ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕರಾದ ಸಾದಿಕ್ ಹಾಜಿ ಕುಂಬ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ ರಾಯ ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!