ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
ಎರಡು ದಿನಗಳ ಭೇಟಿಗಾಗಿ ಕುವೈಟ್ ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕುವೈಟ್‌ನ ದೊರೆ ಶೇಖ್ ಮೆಶಾಲ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್ ಅವರು ಬಯಾನ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಕುವೈಟ್‌ನ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ನೀಡಿ ಗೌರವಿಸಿದರು.
ಕುವೈಟ್‌ನ ಅತ್ಯುನ್ನತ ಗೌರವವಾದ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ನ್ನು ಸಾಮಾನ್ಯವಾಗಿ ರಾಷ್ಟ್ರದ ಮುಖ್ಯಸ್ಥರು, ವಿದೇಶಿ ಗಣ್ಯರು ಮತ್ತು ರಾಜಮನೆತನದ ಸದಸ್ಯರಿಗೆ ಸ್ನೇಹದ ಸೂಚಕವಾಗಿ ನೀಡಲಾಗುತ್ತದೆ. ಈ ಮೊದಲು ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಯುಕೆ ರಾಜ ಪ್ರಿನ್ಸ್ ಚಾರ್ಲ್ಸ್ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದರು.