Author: news_bites_admin

ಕರಾವಳಿರಾಜಕೀಯ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಬಹುನಿರೀಕ್ಷಿತ  ಕಚೇರಿ ನಾಳೆ (ಆ.28) ಉದ್ಘಾಟನೆ

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರ ಬಹುನಿರೀಕ್ಷಿತ ಕಚೇರಿ ಆ.28ರಂದು ಉದ್ಘಾಟನೆಗೊಳ್ಳಲಿದೆ. ಶಾಸಕರಾಗಿ ನೂರು ದಿನದ ಬಳಿಕ ಶಾಸಕರ ಅಧಿಕೃತ ಕಚೇರಿ ಮಿನಿ ವಿಧಾನಸೌಧದ ಬಳಿ ಇರುವ ಹಳೆಯ ಪುರಸಭಾ ಕಚೇರಿ (ಪುಡಾಕಚೇರಿ)ಯಲ್ಲಿ ಉದ್ಘಾಟನೆಗೊಳ್ಳಲಿದ್ದು ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.  ವಿಶಾಲ ಸ್ಥಳಾವಕಾಶವನ್ನು ಹೊಂದಿರುವ ಕಚೇರಿಯಲ್ಲಿ ಶಾಸಕರನ್ನು ಭೇಟಿಯಾಗಲು ಬರುವವರಿಗೆ, ಅಥವಾ ಕಚೇರಿಗೆ  ಬರುವ ಸಾರ್ವಜನಿಕರಿಗೆ ಎಲ್ಲಾ ಸೌಕರ್ಯಗಳನ್ನೊಳನ್ನು ಈ ಕಚೇರಿ ಹೊಂದಿದೆ. ಪಾರ್ಕಿಂಗ್ ವ್ಯವಸ್ಥೆಯೂ ಸಾಕಷ್ಟಿದೆ. ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಕಚೇರಿ ಉದ್ಘಾಟನೆ ಬಳಿಕ ಸುಮಾರು 160 ಕುಟುಂಬಗಳಿಗೆ ಶಾಸಕರು ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಜನಿಕರಿಗೆ ತ್ವರಿತಗತಿಯ ಸೇವೆ ನೀಡುವುದು ಈ ಕಚೇರಿಯ ಉದ್ದೇಶವಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಈ ಕಚೇರಿಗೆ ಬಂದರೆ ಶಾಸಕರನ್ನು ಭೇಟಿಯಾಗಬಹುದು. ಕಚೇರಿಯಲ್ಲಿ ಸಾರ್ವಜನಿಕರಿಂದ ಎಲ್ಲಾ ರೀತಿಯ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಯಾವುದೇ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಅಥವಾ ಯಾವುದೆ ಇಲಾಖೆಯಲ್ಲಿ ಕೆಲಸ ಕಾರ್ಯಗಳು ನಡೆಯದೆ ಇದ್ದಲ್ಲಿ ಶಾಸಕರ ಕಚೇರಿಯಲ್ಲಿರುವ ಆಯಾ ಇಲಾಖೆಗೆ ಸಂಬಂಧಿಸಿದ ಸಿಬಂದಿಗಳನ್ನು ಭೇಟಿಯಾಗಿ ಮಾತನಾಡಬಹುದಾಗಿದೆ. ಕೆಲವೊಂದು ಸಮಸ್ಯೆಗಳಿಗೆ ಕಚೇರಿಯ ಸಿಬಂದಿಗಳೇ ಪರಿಹಾರ ಸೂಚಿಸುವ ಕೆಲಸವನ್ನು ಮಾಡಲಿದ್ದಾರೆ. ನನ್ನ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧದ ಬಳಿಯೇ ಹೊಸ ಕಚೇರಿಯನ್ನು ತೆರೆದಿದ್ದು ಸಾರ್ವಜನಿಕರ ಸೇವೆಗೆ ಸಿಬಂದಿಗಳನ್ನು ನೇಮಕ ಮಾಡಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ, ತೊಂದರೆಗೊಳಗಾದವರು ಶಾಸಕರ ಕಚೇರಿಗೆ ಬಂದು ತಿಳಿಸಬಹುದು. ದೂರು, ಮನವಿ ಇದ್ದರೂ ಕೊಡಬಹುದು. ಕ್ಷೇತ್ರದ ಎಲ್ಲರಿಗೂ ನನ್ನ ಕಚೇರಿಗೆ ಮುಕ್ತವಾಗಿ ಬರಲು ಅವಕಾಶ ಇದೆ ಎಂದು ಶಾಸಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

Read More
ಕರಾವಳಿಕ್ರೈಂ

ಧರ್ಮಸ್ಥಳ: ಯಾತ್ರಾರ್ಥಿಗಳ ಕಾರಿನ ಗಾಜು ಒಡೆದು ಲಕ್ಷಾಂತರ ರೂ ಮೌಲ್ಯದ ಚಿನ್ನ, ನಗದು ಕಳ್ಳತನ

ಬೆಳ್ತಂಗಡಿ: ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಧರ್ಮಸ್ಥಳದಲ್ಲಿ ವರದಿಯಾಗಿದೆ. ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಗದಗ ಮೂಲದ ಯಾತ್ರಾರ್ಥಿಗಳ ಕಾರಿನ

Read More
ಕರಾವಳಿಕ್ರೈಂ

ವಿಡಿಯೋ ಮಾಡಿ ಬಳಿಕ ವಿಷ ಸೇವಿಸಿದ್ದ ಕಟ್ಟತ್ತಾರಿನ ನಾಸಿರ್ ಮೃತ್ಯು

ಪುತ್ತೂರು: ಕೆಲ ದಿನಗಳ ಹಿಂದೆ ವೀಡಿಯೋ ಮಾಡಿ ವಿಷ ಸೇವಿಸುವುದಾಗಿ ತಿಳಿಸಿ ಬಳಿಕ ವಿಷ ಸೇವಿಸಿದ್ದ ಮಾಡಾವು ಕಟ್ಟತ್ತಾರು ನಿವಾಸಿ ನಾಸಿರ್ ಭಾನುವಾರ ಮಧ್ಯಾಹ್ನ ಮಂಗಳೂರು‌ ಆಸ್ಪತ್ರೆಯಲ್ಲಿ

Read More
ರಾಜ್ಯ

ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ತೀರ್ಮಾನ ಮಾಡಿಲ್ಲ- ಕೆ.ಹೆಚ್. ಮುನಿಯಪ್ಪ

ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡುವ ತೀರ್ಮಾನವನ್ನು ನಾವು ತೆಗೆದುಕೊಂಡಿಲ್ಲ ಎಂದು ಆಹಾರ

Read More
ಕರಾವಳಿ


ನಿಮ್ಮ ಮನೆಗೆ ಓಟು ಕೇಳಲು ಬರುತ್ತಾರ..? ಕೊಲೆಯಾದ ಗೌರಿ ಮನೆ ಪರಿಸ್ಥಿತಿ ಕಂಡು ಮರುಗಿದ ಶಾಸಕ ಅಶೋಕ್ ರೈ

ಪುತ್ತೂರು:ದುಷ್ಕರ್ಮಿಯಿಂದ ಕೊಲೆಯಾದ ಅಳಿಕೆ ಕುದ್ದುಪದವು ನಿವಾಸಿ ಗೌರಿ ಮನೆಗೆ ಆ.26ರಂದು ಶಾಸಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅತ್ಯಂತ ಕಡುಬಡತನದಲ್ಲಿ ಕಾಲ ಕಳೆಯುತ್ತಿರುವ ಮೃತ ಗೌರಿ

Read More
ಕರಾವಳಿ

ಕಾನೂನು ಬದಲಾಗಬೇಕು, ದುಬೈ ಮಾದರಿಯ ಶಿಕ್ಷೆ ವಿಧಿಸಬೇಕು- ಅಶೋಕ್ ರೈ

ಪುತ್ತೂರು: ದೇಶದಲ್ಲಿ ಕಾನೂನು ಕಠಿಣವಾಗಬೇಕಾದ ಅವಶ್ಯಕತೆಯಿದ್ದು ದುಬೈ ಮಾದರಿಯ ಕಾನೂನು ಇಲ್ಲಿ ಜಾರಿಗೆ ಬರಬೇಕಾದ ಅನಿವಾರ್ಯತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಎರಡು ದಿನಗಳ ಹಿಂದೆ

Read More
ಕರಾವಳಿ

ಮಾದಕ ದ್ರವ್ಯ ಸೇವನೆಯಿಂದ ಸಮಾಜದಲ್ಲಿ ದುಷ್ಕೃತ್ಯ ಹೆಚ್ಚುತ್ತಿದೆ- ಅಶೋಕ್ ರೈ

ಪುತ್ತೂರು: ಮಾದಕ ದ್ರವ್ಯ ಹೆಚ್ಚಾಗುತ್ತಿರುವುದು ಸಮಾಜದಲ್ಲಿ ದುಷ್ಕೃತ್ಯ ಎಸಗಲು ಕಾರಣವಾಗುತ್ತಿದೆ ಅದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ

Read More
ರಾಜಕೀಯರಾಜ್ಯ

ರಾಜ್ಯ ಬಿಜೆಪಿ ನಾಯಕರನ್ನು ಮೋದಿ ಬೀದಿಪಾಲು ಮಾಡಿದ್ದಾರೆ- ಕಾಂಗ್ರೆಸ್

ಚಂದ್ರಯಾನ-3 ಯೋಜನೆ ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದರು. ರೋಡ್ ಶೋ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ

Read More
ರಾಷ್ಟ್ರೀಯ

ಚಂದ್ರಯಾನ-3 ಲ್ಯಾಂಡ‌ರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ನಾಮಕರಣ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು: ಚಂದ್ರಯಾನ-3ರ ಲ್ಯಾಂಡ‌ರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು‌ ʼಶಿವಶಕ್ತಿʼ ಪಾಯಿಂಟ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದಾರೆ. ಅವರು ನಗರದ ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ

Read More
ಕರಾವಳಿಕ್ರೈಂ

ತೆಕ್ಕಾರು: ಮನೆಗೆ ಅಕ್ರಮ ಪ್ರವೇಶ ಮಾಡಿ ಅನುಚಿತ ವರ್ತನೆ, ಹಲ್ಲೆ ಆರೋಪ- ಮಹಿಳೆಯಿಂದ ಪೊಲೀಸ್ ದೂರು

ಬೆಳ್ತಂಗಡಿ: ಮಹಿಳೆಯೋರ್ವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದಲ್ಲಿ ವರದಿಯಾಗಿದೆ. ತೆಕ್ಕಾರು ನಿವಾಸಿ ಮೈಮುನ ಎಂಬವರ

Read More
error: Content is protected !!