ಮಾದಕ ದ್ರವ್ಯ ಸೇವನೆಯಿಂದ ಸಮಾಜದಲ್ಲಿ ದುಷ್ಕೃತ್ಯ ಹೆಚ್ಚುತ್ತಿದೆ- ಅಶೋಕ್ ರೈ
ಪುತ್ತೂರು: ಮಾದಕ ದ್ರವ್ಯ ಹೆಚ್ಚಾಗುತ್ತಿರುವುದು ಸಮಾಜದಲ್ಲಿ ದುಷ್ಕೃತ್ಯ ಎಸಗಲು ಕಾರಣವಾಗುತ್ತಿದೆ ಅದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರಿನಲ್ಲಿ ಪದ್ಮರಾಜ್ ಎಂಬಾತನಿಂದ ಕೊಲೆಯಾದ ವಿಟ್ಲ ಕುದ್ದುಪದವು ಸಮೀಪದ ಗೌರಿ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಡ್ರಗ್ ಪೆಡ್ಲರ್ ಗಳ ಬಗ್ಗೆ ನಿಗಾ ವಹಿಸುವುದು ಅಗತ್ಯ. ಎಲ್ಲಿಂದ ಮಾದಕ ದ್ರವ್ಯ ಸಪ್ಲೈ ಆಗ್ತದೆ ಎಂಬುವುದನ್ನು ಪತ್ತೆ ಹಚ್ಚಬೇಕಾಗಿದೆ. ಯುವಕರನ್ನು ಮಾದಕ ವ್ಯಸನದಿಂದ ದೂರ ಇರುವಂತೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.